Header Ads
Breaking News

ಮತ್ತೆ ಎಡವಿದ ದಕ್ಷಿಣ ಕನ್ನಡ ಜಿಲ್ಲಾಡಳಿತ : ಕರಾವಳಿ ಉತ್ಸವ ಮೈದಾನದಲ್ಲಿ ನೆರೆದಿರುವ ಸಾವಿರಾರು ಕಾರ್ಮಿಕರು

ಮಂಗಳೂರಿನಲ್ಲಿರುವ ಉತ್ತರ ಭಾರತ ಮೂಲದ ವಲಸೆ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳಿಸಿ ಕೊಡೋದ್ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತೊಮ್ಮೆ ಎಡವಿದೆ. ಸಾವಿರಾರು ಸಂಖ್ಯೆಯಲ್ಲಿರುವ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತ ಸರಿಯಾದ ಮಾಹಿತಿ ನೀಡದಿರೋದ್ರಿಂದ ಕಾರ್ಮಿಕರು ಎಲ್ಲೆಡೆಯಿಂದ ಕಾಲ್ನಡಿಗೆಯಲ್ಲೇ ಮಂಗಳೂರಿಗೆ ಆಗಮಿಸುತ್ತಿದ್ದಾರೆ.ಬಿಹಾರಕ್ಕೆ ರೈಲು ಬರುತ್ತೆ ಎನ್ನುವ ವದಂತಿಯ ಹಿನ್ನಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಕಾರ್ಮಿಕರು ನಗರದ ಲಾಲ್ ಭಾಗ್ ಬಳಿ ಇರುವ ಕರಾವಳಿ ಉತ್ಸವ ಮೈದಾನಕ್ಕೆ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಬಂದಿದ್ದರು.ನಿನ್ನೆಯಿಂದ ಊಟ ,ನಿದ್ದೆ ಇಲ್ಲದೆ ಸರತಿ ಸಾಲಿನಲ್ಲೇ ಕುಳಿತಿದ್ದು, ಕಾರ್ಮಿಕರನ್ನು ಯಾರೂ ಗಣನೆಗೆ ತೆಗೆದುಕೊಳ್ಳದೆ ಅತಂತ್ರರಾಗಿದ್ದರು.

Related posts

Leave a Reply

Your email address will not be published. Required fields are marked *