Header Ads
Breaking News

ಮತ್ತೆ ಗರಿಗೆದರಿದ ಉಚ್ಚಿಲ ಸ್ಮಶಾನ ವಿವಾದ : ಒಂದೂವರೆ ತಿಂಗಳೊಳಗೆ ವ್ಯವಸ್ಥೆ ಸುಗಮಗೊಳಿಸುವ ಜಿಲ್ಲಾಡಳಿತ ಭರವಸೆ

ಹಾಲಿ-ಮಾಜಿ ಶಾಸಕರುಗಳ ಏಕಪಕ್ಷೀಯ ನಿರ್ಧಾರದಿಂದಾಗಿ ನಮಗೆ ಹೆಣ ಸುಡಲು ಸ್ಮಶಾನವೇ ಇಲ್ಲವಾಗಿದ್ದು, ಈ ಹಿನ್ನಲೆಯಲ್ಲಿ ಉಚ್ಚಿಲ ಗ್ರಾ.ಪಂ. ಮುಂಭಾಗದಲ್ಲೇ ಹೆಣ ಸುಡಲು ತಯಾರಿ ನಡೆಸಿದ ದಲಿತ ಮುಖಂಡರಿಗೆ ಮುಂದಿನ ಒಂದುವರೆ ತಿಂಗಳೋಳಗೆ ವ್ಯವಸ್ಥೆ ಸುಗಮಗೊಳಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿದ ಬಳಿಕ ಸಮಸ್ಯೆ ತಾತ್ಕಾಲಿಕ ಶಮನಗೊಂಡಿದೆ.
ಉಚ್ಚಿಲ ಮುಳ್ಳಗುಡ್ಡೆ ನಿವಾಸಿ ಮಾಜಿ ಗ್ರಾ.ಪಂ.ಸದಸ್ಯ ಶಂಕರ್ ಎಂಬವರು ನಿನ್ನೆ ರಾತ್ರಿ ಮೃತರಾಗಿದ್ದು, ಅವರ ಶವವನ್ನು ಸುಡಲು ಸ್ಮಶಾನದ ವ್ಯವಸ್ಥೆ ಇಲ್ಲದ ಕಾರಣ ಮುಂಜಾನೆ 9ರ ಸುಮಾರಿಗೆ ಹೆಣವನ್ನು ಸುಡಲು ಗ್ರಾ.ಪಂ. ಮುಂಭಾಗದಲ್ಲೇ ದಲಿತ ಪ್ರಮುಖರು ಪೂರಕ ವ್ಯವಸ್ಥೆಗಳನ್ನು ನಡೆಸುತ್ತಿದ್ದರು, ಈ ಸಂದರ್ಭ ಮಾಹಿತಿ ತಿಳಿದ ಕಾಪು ತಹಶಿಲ್ದಾರ್, ಎಡಿಸಿ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದಲಿತ ಮುಖಂಡರನ್ನು ಮನವೂಲಿಸುವ ಪ್ರಯತ್ನ ಫಲಿಸಲಿಲ್ಲ, ಈ ಸಂದರ್ಭ ಮಾತನಾಡಿದ ದಲಿತ ಮುಖಂಡರಾದ ಲೋಕೇಶ್ ಕಂಚಿನಡ್ಕ, ಹಾಲಿ ಶಾಸಕ ಲಾಲಾಜಿ ಮೆಂಡನ್ ಹಾಗೂ ಮಾಜಿ ಶಾಸಕ ವಿನಯ ಕುಮಾರ್ ಸೊರಕೆಯವರ ಏಕಪಕ್ಷೀಯ ನಿರ್ಧಾರ ಹಾಗೂ ಮೊಗವೀರ ಸಮೂದಾಯವನ್ನು ಒಲೈಸುವ ತಂತ್ರದಿಂದ ಇತರೆ ಸಮಾಜ ಭಾಂಧವರಿಗೆ ಅನ್ಯಾಯ ಎಸಗಲಾಗಿದೆ ಎಂದರು.

ಇದಕ್ಕೆ ಉತ್ತರಿಸಿದ ಉಡುಪಿ ಜಿಲ್ಲಾ ಎಡಿಸಿ ಸದಾಶಿವ ಪ್ರಭು, ಈ ಸ್ಮಶಾನ ಕಾಮಗಾರಿ ಜಿಲ್ಲಾಢಳಿತದ ಜವಾಬ್ದಾರಿ, ನ್ಯಾಯಾಲಯದಿಂದ ತಡೆ ಬಂದ ಹಿನ್ನಲೆಯಲ್ಲಿ ಕಾಮಗಾರಿಗೆ ಹಿನ್ನಡೆಯಾಗಿರಬಹುದು, ಮುಂದಿನ ದಿನದಲ್ಲಿ ನ್ಯಾಯಾಲಯಕ್ಕೆ ಪೂರಕ ದಾಖಲೆಗಳನ್ನು ಒದಗಿಸಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.ಕಾಪು ತಹಶಿಲ್ದಾರ್ ಮಾತನಾಡಿ ನ್ಯಾಯಾಲಯದ ತಡೆಯಾಜ್ಞೆಯ ಹೊರತಾಗಿಯೂ ರಸ್ತೆ ಕಾಮಗಾರಿ ನಡೆದಿಯಾದರೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು, ಅದಲ್ಲದೆ ಸ್ಮಶಾನ ವಿಚಾರವಾಗಿ ನ್ಯಾಯಾಲಯದಲ್ಲಿ ತ್ವರಿತ ತೀರ್ಪು ಬರುವಂತ್ತೆ ಕಾನೂನು ಬದ್ಧ ಒತ್ತಡ ಹೇರಲಾಗುವುದೆಂದರು.ಅಂತಿಮವಾಗಿ ಜಿಲ್ಲಾಢಳಿತದ ಭರವಸೆಯ ಮಾತಿನ ಮೇಲೆ ನಂಬಿಕೆ ಇರಿಸಿ ಇದೀಗ ಹೆಣವನ್ನು ಬೇರೆಡೆ ಸಾಗಿಸಿ, ಹೆಣ ಸುಡಲು ಗ್ರಾ.ಪಂ. ಮುಂಭಾಗ ನಡೆಸಿದ ಪೂರ್ವ ತಯಾರಿಯನ್ನು ತೆರವುಗೊಳಿಸಿದ್ದೇವೆ. ನಮಗೆ ನೀಡಿದ ಭರವಸೆ ಹುಸಿಯಾದರೆ ನಮ್ಮ ಹೋರಾಟ ತೀವೃ ಸ್ವರೂಪ ಪಡೆಯಲಿದೆ ಎಂಬುದಾಗಿ ದಲಿತ ಮುಖಂಡ ಸುಂದರ್ ಮಾಸ್ತರ್ ಎಚ್ಚರಿಸಿದ್ದಾರೆ.

Related posts

Leave a Reply

Your email address will not be published. Required fields are marked *