Header Ads
Breaking News

ಮಂಗಳೂರು : ಬಬ್ಬುಸ್ವಾಮಿ ದೈವದ ಕಾಣಿಕೆ ಹುಂಡಿ ಅಪವಿತ್ರ

ಉಳ್ಳಾಲದ ಕೊರಗಜ್ಜನ ಕಟ್ಟೆಗೆ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ ಪ್ರಕರಣದ ಬೆನ್ನಲ್ಲೇ ಮಂಗಳೂರು ನಗರದಲ್ಲಿ ಮತ್ತೊಂದು ಕಡೆ ಅದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಕಾಪಿಕಾಡ್ ಬಳಿಯ ದಡ್ಡಲ್ ಕಾಡ್ ಎಂಬಲ್ಲಿ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಮುಂದಿರುವ ಕಾಣಿಕೆ ಡಬ್ಬಿಯ ಹುಂಡಿ ಹಣವನ್ನು ಕದ್ದು ಅಪವಿತ್ರಗೊಳಿಸಲಾಗಿದೆ. 
ನಿನ್ನೆ ರಾತ್ರಿ ದುಷ್ಕರ್ಮಿಗಳು ಬಬ್ಬುಸ್ವಾಮಿಯ ಕಾಣಿಕೆ ಡಬ್ಬಿಯಿಂದ ಹುಂಡಿ ಹಣವನ್ನು ಕಳವು ಮಾಡಿದ್ದು ಬಳಿಕ ಅದಕ್ಕೆ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ್ದಾರೆ. ಅಲ್ಲದೆ, ಹುಂಡಿಗೆ ಏನೇನೋ ವಿಚಿತ್ರ ರೀತಿಯಲ್ಲಿ ಬರೆದಿರುವ ಚೀಟಿ ಒಂದನ್ನು ಹಾಕಿದ್ದಾರೆ. ವಿಗ್ರಹಾರಾಧನೆ, ದೈವಿಕ ಶಕ್ತಿಯನ್ನು ನಿಂದಿಸಿ ಬರೆಯಲಾಗಿದೆ. ಇಂದು ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದ್ದು ಸ್ಥಳೀಯರು ಉರ್ವಾ ಪೋಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ, ರಾತ್ರಿ ವೇಳೆ ಈ ಜಾಗದಲ್ಲಿ ಬೀದಿ ದೀಪ ಆರಿಸಲಾಗಿತ್ತು. ಕಿಡಿಗೇಡಿಗಳು ಬಬ್ಬುಸ್ವಾಮಿ ಸ್ಥಾನದ ಆಸುಪಾಸಿನ ಬೀದಿ ದೀಪಗಳನ್ನು ಆರಿಸಿ, ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.
ಉರ್ವಾ ಠಾಣೆ ಪೋಲೀಸರು ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ವ್ಯಾಪ್ತಿಯಲ್ಲಿ ಇದು ನಾಲ್ಕನೇ ಪ್ರಕರಣವಾಗಿದ್ದು ಬೆನ್ನು ಬೆನ್ನಿಗೆ ಈ ರೀತಿಯ ಕೃತ್ಯ ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಉದ್ದೇಶಪೂರ್ವಕ ಈ ರೀತಿ ಕೃತ್ಯ ಮಾಡುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಪೋಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

Leave a Reply

Your email address will not be published. Required fields are marked *