Header Ads
Header Ads
Breaking News

ಮತ್ತೆ ಬಾಲ ಬಿಚ್ಚಿದ್ರೆ ಗೊತ್ತಲ್ವಾ..? ಅಷ್ಟೇ..!: ಪೆರೇಡ್‌ನಲ್ಲಿ ರೌಡಿಗಳಿಗೆ ಮಂಗಳೂರು ಕಮಿಷನರ್ ಡಾ. ಹರ್ಷ ಖಡಕ್ ವಾರ್ನಿಂಗ್..!

 ಮತ್ತೆ ಬಾಲ ಬಿಚ್ಚಿದ್ರೋ ಹುಷಾರ್.. ಟೈಂ ಟು ಟೈಂ ಕೋರ್ಟ್‌ಗೆ ಅಟೆಂಡ್ ಆಗ್ಬೇಕು.. ಮತ್ತೆ ಬಾಲ ಬಿಚ್ಚಿದ್ರೆ ಗೊತ್ತಲ್ವಾ.. ಅಷ್ಟೇ.. ಇದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷಾ ಪಿ.ಎಸ್. ಅವರು ಮಂಗಳೂರಿನ ರೌಡಿಶೀಟರ್‌ಗಳಿಗೆ ಕೊಟ್ಟಿರುವ ಖಡಕ್ ವಾರ್ನಿಂಗ್. ಹೌದು. ಮಂಗಳೂರಿನಲ್ಲಿ ರೌಡಿಗಳ ಪೆರೇಡ್‌ನಲ್ಲಿ ನಗರ ಪೊಲೀಸ್ ಕಮೀಷನರ್ ಡಾ.ಪಿ.ಎಸ್ ಹರ್ಷ ನಗರದ ಕುಖ್ಯಾತ ರೌಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.ಮತ್ತೆ ಬಾಲ ಬಿಚ್ಚಿ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ನುಗ್ಗಿ ಹೊಡೆಯೋದಾಗಿ ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಮಂಗಳೂರು ಕಮೀಷನೇಟರ್ ವ್ಯಾಪ್ತಿಯ ವಿವಿಧ ಠಾಣೆಗಳ 375 ರೌಡಿಗಳ ಪೆರೇಡ್‌ನಲ್ಲಿ ಕಮೀಷನರ್ ಹರ್ಷ ಅವರು ಪ್ರತಿಯೊಬ್ಬ ರೌಡಿಶೀಟರ್‌ಗಳಿಂದ ಮಾಹಿತಿ ಸಂಗ್ರಹಿಸಿದ್ರು. ರೌಡಿಗಳು ಪ್ರತಿ ಎರಡು ವಾರಗಳಿಗೊಮ್ಮೆ ಠಾಣೆಗೆ ಬಂದು ದಿನಚರಿ ಪಟ್ಟಿ ಒಪ್ಪಿಸಬೇಕು.. ಸಮಾಜದ ಮುಖ್ಯವಾಹಿನಿಗೆ ಬರಲು ಯತ್ನಿಸುವ ರೌಡಿಗಳು ಬಯಸಿದರೆ ಅವರ ವ್ಯಕ್ತಿತ್ವವನ್ನು ಸೂಕ್ಷ್ಮವಾಗಿ ಗಮನಿಸಿ ಅವರಿಗೆ ಬೇಕಾದ ನೆರವನ್ನು ಒದಗಿಸಲಾಗುವುದು ಎಂದು ಆಫರ್‌ನ್ನು ಕೂಡ ನೀಡಿದ್ರು.

Related posts

Leave a Reply

Your email address will not be published. Required fields are marked *