Header Ads
Breaking News

ಮತ್ತೆ ಸದ್ದುಮಾಡಿದ ಪ್ರಮೋದ್ ಸಾಲ ಪ್ರಕರಣ: ಪ್ರಮೋದ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಗರಂ!

ಉಡುಪಿ ಮಲ್ಪೆಯ ಸಿಂಡಿಕೇಟ್ ಬ್ಯಾಂಕನಲ್ಲಿ ಸಾಲ ಪಡೆದವರು ಪ್ರಮೋದ್ ಅವರು 1.10 ಕೋಟಿ ಆಸ್ತಿ ಅಡವಿಟ್ಟು 193 ಕೋಟಿ ಸಾಲ ಪಡೆದಿದ್ದಾರೆ ಎಂದು ಪ್ರಮೋದ್ ಮಧ್ವರಾಜ್ ವಿರುದ್ಧ ಸಾಮಾಜಿಕ ಹೋರಾಟಗಾರ ಟಿಜೆ ಆಬ್ರಹಂ ಗರಂ ಆಗಿದ್ದಾರೆ.

ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹಿರಂಗವಾಗಿ ನಾನು ಪ್ರಚಾರ ಮಾಡುತ್ತೇನೆ, ಪ್ರಮೋದ್ ಮಧ್ವರಾಜ್‍ಗೆ ಯಾರೂ ಓಟ್ ಹಾಕಬೇಡಿ, ಮೂಲೆ ಮೂಲೆ ಹೋಗಿ ಪ್ರಚಾರ ಮಾಡುತ್ತೇನೆ, ನೇರವಾಗಿ ಮಧ್ವರಾಜ್ ಗೆ ಸವಾಲು ಹಾಕುತ್ತೇನೆ, ನೀವು ಈ ಬಾರಿ ಠೇವಣಿ ಕಳೆದುಕೊಳ್ಳುತ್ತೀರಿ. ರಾಜ್ಯದ ರೈತರು ಲಕ್ಷ ರುಪಾಯಿಗೆ ನೇಣು ಹಾಕೊತ್ತಾರೆ, ನಿಮ್ಮಂತವರು ಸಂಸತ್ ಪ್ರವೇಶ ಮಾಡಬಾರದು, ನಾನು ವಿಚಾರವನ್ನು ವೈಯಕ್ತಿಕವಾಗಿಯೇ ತಗೊಂಡಿದ್ದೇನೆ ಎಂದು ಹೇಳಿದರು.

ಪ್ರಮೋದ್ ನನ್ನ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದರು. ಮಾನನಷ್ಟ ಮೊಕದ್ದಮೆ ಬದಲು ಕ್ರಿಮಿನಲ್ ಕೇಸು ಹಾಕಿದ್ದಾರೆ. ನಾನು 9 ಬಾರಿ ಕೋರ್ಟಿಗೆ ಹಾಜರಾಗಿದ್ದೇನೆ. ಮಧ್ವರಾಜ್ ಬ್ಯಾಂಕ್ ಕಬಳಿಸಿ ಕೋರ್ಟನ್ನು ದುರ್ಬಳಕೆ ಮಾಡಿದ್ದಾರೆ
ಒಂದು ಬಾರಿರೂ ಕೋರ್ಟಿಗೆ ಹಾಜರಾಗಿಲ್ಲ,ಮಿಸ್ಟರ್ ಮಧ್ವರಾಜ್ ನನ್ನ ಮೇಲೆ ಕೇಸು ಹಾಕ್ರೀ
ಯಾಕ್ರೀ ಕೇಸ್ ಹಾಕೋದಕ್ಕೆ ಕಾಸಿಲ್ವಾ..?, ಧಂ ಇದ್ರೆ ಕೇಸ್ ಫೈಲ್ ಮಾಡಿ, ಧಂ ಇಲ್ಲದಿದ್ದರೆ ಮೋಸ ಹಗರಣ ಒಪ್ಪಿಕೊಳ್ಳಿ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *