Header Ads
Header Ads
Breaking News

ಮತ್ತೊಮ್ಮೆ ವಿಶ್ವಾಸಮತ ಸಾಬೀತು ಮಾಡಿ, ನಾಗಾಲ್ಯಾಂಡ್ ಸರಕಾರಕ್ಕೆ ರಾಜ್ಯಪಾಲರ ಸೂಚನೆ

ಶನಿವಾರದ ಒಳಗಾಗಿ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತು ಪಡಿಸುವಂತೆ ನಾಗಾಲ್ಯಾಂಡ್ ರಾಜ್ಯಪಾಲ ಪಿ. ಬಿ. ಆಚಾರ್ಯ ಅವರು ಮುಖ್ಯಮಂತ್ರಿ ಡಾ. ಶುರ್ಹೊಜುವಾಲಿ ಲೀಝಿಸು ಅವರಿಗೆ ಗುರುವಾರ ರಾತ್ರಿ ಮತ್ತೆ ಸೂಚಿಸಿದ್ದಾರೆ.
ಇದಕ್ಕೂ ಮೊದಲು ಅವರು ನೀಡಿದ್ದ ಸೂಚನೆಯನ್ನು ರಾಜ್ಯ ಸಚಿವ ಸಂಪುಟ ತಿರಸ್ಕರಿಸಿತ್ತು. ಈ ಮಧ್ಯೆ, ೪೪ ಶಾಸಕರ ಬೆಂಬಲ ತಮಗಿದೆ ಎಂದು ಹೇಳಿಕೊಂಡು ಸರ್ಕಾರ ರಚಿಸಲು ಮುಂದಾಗಿದ್ದ ಮಾಜಿ ಮುಖ್ಯಮಂತ್ರಿ ಟಿ. ಆರ್. ಝೀಲಿಯಾಂಗ್ ಮತ್ತು ಇತರ ೧೦ ಶಾಸಕರನ್ನು ಎನ್ಪಿ‌ಎಫ್ ಪಕ್ಷದಿಂದ ಅಮಾನತುಗೊಳಿಸಿ ಹೊರಡಿಸಿದ್ದ ಆದೇಶವನ್ನು ಲೀಝಿಸು ಅವರು ವಾಪಸ್ ಪಡೆದಿದ್ದಾರೆ. ಆದರೆ, ಆದೇಶದ ಪ್ರತಿ ತಮಗೆ ಇನ್ನೂ ಲಭ್ಯವಾಗಿಲ್ಲ. ಸರ್ಕಾರ ರಚಿಸುವ ತಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಝೀಲಿಯಾಂಗ್ ಹೇಳಿದ್ದಾರೆ.

Related posts

Leave a Reply