Header Ads
Header Ads
Breaking News

ಮತ್ಸ್ಯೋಧ್ಯಮಿಗಳ ಮೇಲೆ ಐಟಿ ಟಾರ್ಗೆಟ್ ವಿಚಾರ ಐಟಿಗೆ ನಾನು ಟಾರ್ಗೆಟ್ ಅನ್ನೋದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಪ್ರತಿಕ್ರಿಯೆ ಕೊಡದಿರುವುದಕ್ಕೂ ಕಾರಣ ಕೊಡಲ್ಲ ಉಡುಪಿಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ

ಮತ್ಸೋಧ್ಯಮಿಗಳ ಕಚೇರಿ, ಮನೆಗಳ ಮೇಲೆ ಐಟಿ ಅಧಿಕಾರಿಗಳು ರೈಡ್ ಮಾಡಿರುವ ಕುರಿತು ಮತ್ಸೋಧ್ಯಮಿಯೂ ಆಗಿರುವ ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದಾರೆ.ಐಟಿ ಅಧಿಕಾರಿಗಳಿಗೆ ನಾನು ಟಾರ್ಗೆಟ್ ಅನ್ನೋದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಪ್ರತಿಕ್ರಿಯೆ ಯಾಕೆ ನೀಡೋದಿಲ್ಲ ಅನ್ನೋದಕ್ಕೂ ಕಾರಣ ನೀಡುವುದಿಲ್ಲ. ಯಾವುದೇ ಟಾರ್ಗೆಟಿಗೂ ನಾನು ತಲೆಕೆಡಿಸಲ್ಲ. ನನ್ನನ್ನು ದೇವರು ಮಾತ್ರ ಟಾರ್ಗೆಟ್ ಮಾಡಬಹುದು ಎಂದಿದ್ದಾರೆ.

ಇನ್ನು ನಾನು ಚುನಾವಣೆಗೆ ಯಾರಿಂದಲೂ ಫಂಡ್ ತೆಗೆದುಕೊಂಡಿಲ್ಲ. ಕಳುಹಿಸಿದವರ ಹಣ ನಾನು ವಾಪಾಸ್ ಕಳುಹಿಸಿದ್ದೇನೆ. ನಾನು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತೇನೆ. ದೇಶದ ಕಾನೂನಿನಂತೆ ನಾನು ನಡೆದುಕೊಳ್ಳುತ್ತಿದ್ದೇನೆ. ನನ್ನ ಮೇಲೆ ದೇವರ ಟಾರ್ಗೆಟ್ ಬಿಟ್ಟು ಇನ್ಯಾರದ್ದೂ ಟಾರ್ಗೆಟ್ ನಡೆಯಲ್ಲ ಎಂದು ಸವಾಲೆಸೆದ್ರು.ಇನ್ನು ಹಾರ್ಡ್ ಹಿಂದುತ್ವ ಸಾಫ್ಟ್ ಹಿಂದುತ್ವ ಬಗ್ಗೆ ಪ್ರತಿಕ್ರಿಯಿಸಿದ ಮಧ್ವರಾಜ್, ಹಾರ್ಡ್ ಹಿಂದುತ್ವ ಅಂದ್ರೆ ಜನರನ್ನು ಕೊಲ್ಲೋದಾ ಕಾಂಗ್ರೆಸ್ಸಿನವರು ಹಿಂದೂಗಳಲ್ವ ಕಾಂಗ್ರೆಸ್ಸಿನವರು ದೇವಸ್ಥಾನಕ್ಕೆ ಹೋಗ್ಬಾರ್ದಾ ಎಂದು ಪ್ರಶ್ನಿಸಿದ್ರು. ಇನ್ನು ರಾಹುಲ್ ಗಾಂಧಿ ಟೆಂಪಲ್ ರನ್ ಸಮರ್ಥಿಸಿದ ಮಧ್ವರಾಜ್, ಐಪಿಎಸ್ ಅಂದ್ರೆ ಪಕೋಡ ಸರ್ವಿಸ್ ಅಂತ ರಾಹುಲ್ ಗಾಂಧಿ ಹೇಳಿಲ್ಲ. ಐಪಿಎಸ್ ಅಂದ್ರೆ ಇಂಡಿಯನ್ ಪೊಲೀಸ್ ಸರ್ವಿಸ್. ಶಾರ್ಟ್ ಫಾರ್ಮ್ ಗಳಿಗೆ ಹಲವಾರು ಅರ್ಥಗಳಿವೆ. ಯಾರೂ ಹೇಗೆ ಬೇಕಾದ್ರೂ ಅರ್ಥೈಸಿಕೊಳ್ಳಬಹುದು ಎಂದ್ರು.

ಬೈಟ್-ಪ್ರಮೋದ್ ಮಧ್ವರಾಜ್.ಸಚಿವ

Related posts

Leave a Reply