Header Ads
Breaking News

ಮದನಿನಗರದ ಘರ್ಷಣೆಗೆ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆ: ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್

ಮದನಿ ನಗರದಲ್ಲಿ ನಡೆದ ಹಲ್ಲೆ ಪ್ರಕರಣ ಗಂಭೀರವಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರು ನೇರ ಹೊಣೆ, ಶರಣ್ ಪಂಪ್ ವೆಲ್ ಆರೋಪಿಸಿದರು. ನಗರದ ನೆಹರೂ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮುಗಿಸಿ ಬಸ್‌ನಲ್ಲಿ ವಾಪಾಸಾಗುತ್ತಿದ್ದವರ ಮೇಲೆ ಕ್ಷುಲ್ಲಕ ವಿಷಯಕ್ಕೆ ಯುವಕರ ಗುಂಪೊಂದು ಮದನಿ ನಗರದಲ್ಲಿ ಬಸ್‌ನ್ನು ಅಡ್ಡಹಾಕಿ, ಗಾಜು ಒಡೆದು, ಮಕ್ಕಳು, ಮಹಿಳೆಯರು ಹಾಗೂ ಯುವಕರ ಮೇಲೆ ಹಲ್ಲೆ ನಡೆಸಿರುವುದು ಗಂಭೀರ ಪ್ರಕರಣವಾಗಿದೆ. ಮಹಿಳೆಯರ ಮೇಲೆ ನಡೆದ ದೌರ್ಜನ್ಯ, ಬಸ್ ನಿಲ್ಲಿಸಿ ಹೊಡೆಯುವ ಧೈರ್ಯದ ಹಿಂದೆ ಕ್ಷೇತ್ರದ ಶಾಸಕರ ಷಡ್ಯಂತ್ರ ಅಡಗಿದೆ ಎಂದು ವಿಶ್ವಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್‌ನ ಉಳ್ಳಾಲ ಪ್ರಖಂಡ ಅಧ್ಯಕ್ಷ ಹರಿದಾಸ್ ಮಾಡೂರು, ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರು, ರವಿ ಅಸೈಗೋಳಿ ಹಾಗೂ ನಾರಾಯಣ ಕುಂಪಲ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *