Header Ads
Breaking News

ಮದರಸ ಪಠ್ಯಪುಸ್ತಕ್ ವಿಚಾರದಲ್ಲಿ ದಾಂಧಲೆ

ಮದರಸ ಪಠ್ಯ ಪುಸ್ತಕದ ವಿಚಾರಕ್ಕೆ ಸಂಬಂಧಿಸಿದಂತೆ ಸುಮಾರು 50 ಜನರ ತಂಡವೊಂದು ಪಡ್ಡಂದಡ್ಕದ ಕುಟುಂಬವೊಂದರ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದು, ನಾಲ್ವರು ಗಾಯಗೊಂಡು ಮೂಡುಬಿದಿರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ.ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಡ್ಡಂದಡ್ಕ ಎಂಬಲ್ಲಿರುವ ನೂರ್ ಹುಲ್ ಜುಮ್ಮಾ ಮಸೀದಿಯಲ್ಲಿ ಎಸ್. ಕೆ.ಎಸ್.ಎಸ್.ಎಫ್ ಸಂಘಟನೆಯ ವತಿಯಿಂದ ಮಲಿಯಾಳಿ ಭಾಷೆಯಲ್ಲಿ ಮದರಸ ತರಗತಿಗಳನ್ನು ನಡೆಸುತ್ತಿದ್ದು, ಸ್ಥಳೀಯ ಮಕ್ಕಳಿಗೆ ಅದು ಕಲಿಯಲು ಕಷ್ಟವಾಗಬಹುದೆನ್ನುವ ಉದ್ದೇಶದಿಂದ ಮದರಸ ವಠಾರದ ಸಾಜೀದಾ ಮಂಜಿಲ್‌ನ ಎಸ್.ಎಸ್.ಎಫ್ ಸಂಘಟನೆಯ ಮಹಮ್ಮದ್ ಶಬೀರ್ ಎಂಬವರು ತಮ್ಮ ಮನೆಯಲ್ಲಿ ಮಕ್ಕಳಿಗೆ ಕನ್ನಡದಲ್ಲಿ ಪಾಠ ಹೇಳಿಕೊಡುತ್ತಿದ್ದರು. ಇತ್ತ ಮಸೀದಿ ಅಧ್ಯಕ್ಷ ಯು.ಕೆ ಮಹಮ್ಮದ್ ಸಹಿತ 16 ಮಂದಿ ಅವರ ಮನೆಗೆ ನುಗ್ಗಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದೀಗ ಗಾಯಾಳುಗಳು ಮೂಡಬಿದರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿದೆ.

 

Related posts

Leave a Reply