Breaking News

ಮದುವೆ ಕಾರ್ಯಕ್ರಮಕ್ಕೆ ಹೋದ ದಂಪತಿ ನಾಪತ್ತೆ,  ಕುಮಾರಧಾರ ನದಿ ದಾಟುವ ಐರಕಳ ಬಳಿ ಹುಡುಕಾಟ

ಮದುವೆಗೆ ಹೋಗಿದ್ದ ದಂಪತಿ ವಾಪಸ್ ಮನೆ ಸೇರಲು ನದಿ ದಾಟಲು ಯತ್ನಿಸಿದ್ದು, ಈ ಸಂದರ್ಭ ಅವರು ನಾಪತ್ತೆಯಾದ ಘಟನೆ ಪುತ್ತೂರು ತಾಲೂಕಿನ ಚಾರ್ವಾಕ ಬಳಿ ನಡೆದಿದೆ.
ಚಾರ್ವಾಕ ಗ್ರಾಮದ ಮುದ್ವ ಎಂಬಲ್ಲಿನ ಕುಂಬ್ಲಾಜೆ ನಿವಾಸಿ ಪರಮೇಶ್ವರ ಗೌಡ ಮತ್ತು ಭವಾನಿ ದಂಪತಿ ಕಾಣೆಯಾದವರು. ಘಟನೆ ಬುಧವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕುಮಾರಧಾರ ನದಿಯ ಇನ್ನೊಂದು ಭಾಗದಲ್ಲಿರುವ ಕುಂತೂರು ಎಂಬಲ್ಲಿಗೆ ಇವರು ಬುಧವಾರ ಹೋಗಿದ್ದರು.
ಸಂಜೆ ಎಲ್ಲ ಕಾರ್ಯಕ್ರಮ ಮುಗಿದು ರಿಕ್ಷಾದಲ್ಲಿ ನದಿದ ದಡದವರೆಗೂ ಬಂದಿದ್ದರು. ತದನಂತರ ನಾಪತ್ತೆಯಾಗಿದ್ದಾರೆ. ನದಿಯನ್ನು ದಾಟಿ ತಮ್ಮ ಊರು ಸೇರುವ ಉದ್ದೇಶದಿಂದ ಅವರು ರಿಕ್ಷಾದಲ್ಲಿ ನದಿ ದಡದವರೆಗೆ ಬಂದಿದ್ದರು. ಇಬ್ಬರೂ ನದಿ ದಾಟುವಾಗ ಬಂಡೆಯ ಮೇಲಿನ ಹಾವಸೆ ಜಾರಿ ನೀರಿಗೆ ಬಿದ್ದರೇ ಎಂಬ ಅನುಮಾನ ಕಾಡುತ್ತಿದೆ. ಇದೀಗ ನದಿ ಒಡಲಲ್ಲಿ ಹುಡುಕಾಟ ನಡೆಯುತ್ತಿದೆ. ಈ ಭಾಗದ ನೀರಿನಲ್ಲಿ ಅಪಾಯಕಾರಿ ಸುಳಿ ಇದ್ದು, ಈ ಹಿಂದೆಯೂ ಇಲ್ಲಿ ದುರಂತ ಸಂಭವಿಸಿತ್ತು.

Related posts

Leave a Reply