Header Ads
Breaking News

ಮದ್ಯದಂಗಡಿ ಓಪನ್ ಆದ ದಿನವೇ ಡ್ರಿಂಕ್ ಆ್ಯಂಡ್ ಡ್ರೈವ್ : ಮಿತ್ರರನ್ನು ಬಿಟ್ಟು ಪರಾರಿ

ಪಾನಮತ್ತರು ಸಂಚರಿಸುತ್ತಿರುವ ಕಾರೊಂದು ಉಡುಪಿ ಚಿತ್ತರಂಜನ್ ಸರ್ಕಲ್ ಬಳಿ ಇರುವ ವೃತ್ತ ಗೋಪುರಕ್ಕೆ ಢಿಕ್ಕಿ ಹೊಡೆದಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಕಾರಿನಲ್ಲಿ ಐವರು ಸಂಚರಿಸುತ್ತಿದ್ದರು, ಇವರಿಗೆ ಗಂಭೀರ ಸ್ವರೂಪದ ಗಾಯಾಳುಗಳಾಗಿದ್ದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ರಕ್ಷಿಸಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ. ಕುಡಿತದ ಅಮಲಿನಲ್ಲಿದ್ದ ಉಳಿದ ಮೂವರು, ಸ್ಥಳದಲ್ಲಿ ಸೇರಿರುವ ಜನರನ್ನು ಕಂಡು ಮುಜುಗರದಿಂದಾಗಿ ಗಾಯಾಳು, ಮಿತ್ರರನ್ನು ಬಿಟ್ಟು ಪರಾರಿಯಾದರೆಂದು ತಿಳಿದು ಬಂದಿದೆ. ಗಾಯಾಳುಗಳನ್ನು ವೆಂಕಟೇಶ ಪ್ರಭು, (47 ವ) ಸಂತೋಷ್ ಶೇಟ್ (42 ವ) ಒಳಕಾಡು ಮೂಲದವರೆಂದು ಎಂದು ಗುರುತಿಸಲಾಗಿದೆ. ಚಾಲಕ ಪಾನಮತ್ತನಾಗಿ ಅತಿವೇಗದಲ್ಲಿ ಕಾರು ಚಲಾಯಿಸಿದ್ದು, ನಿಯಂತ್ರಣ ಸಿಗದೆ ಅಪಘಾತ ಸಂಭವಿಸಲು ಕಾರಣವೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು, ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

Leave a Reply

Your email address will not be published. Required fields are marked *