Header Ads
Header Ads
Breaking News

ಮದ್ಯದ ಅಮಲಿನಲ್ಲಿ ಬಂದ ಪತಿಯಿಂದ ಪತ್ನಿಗೆ ಹಲ್ಲೆ

ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಗುಂಡ್ಯಡ್ಕ ಎಂಬಲ್ಲಿ ದಾವೂದ್ ಎಂಬಾತ ಮದ್ಯದ ಅಮಲಿನಲ್ಲಿ ತನ್ನ ಪತ್ನಿಯ ಮನೆಗೆ ಬಂದು ಬಾಗಿಲು ತೆಗೆಯುವಂತೆ ಹೇಳಿದ್ದಾನೆ. ಪತ್ನಿ ಹೆದರಿಕೆಯಿಂದ ಬಾಗಿಲು ತೆಗಿಯದೇ ಇದ್ದಾಗ ಬಾಗಿಲು ಮುರಿದ ದಾವೂದ್, ಕಬ್ಬಿಣದ ಸಲಾಖೆಯಿಂದ ಪತ್ನಿಗೆ ಹೊಡೆದಿದ್ದಾನೆ ಎನ್ನಲಾಗಿದೆ. ಈ ಘಟನೆಯಿಂದ ಪತ್ನಿಗೆ ತೀವ್ರತರಹದ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತದ್ದಾರೆ.

Related posts

Leave a Reply

Your email address will not be published. Required fields are marked *