Header Ads
Breaking News

ಮದ್ಯಪಾನ, ಡ್ರಗ್ಸ್‍ಗಳಿಂದ ದೂರವಿರಿ ಪರಿವರ್ತನೆಯೇ ಗ್ರಾಮಾಭಿವೃದ್ಧಿ ಯೋಜನೆಯ ಧ್ಯೇಯ : ಡಾ|ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯ

ಶಬ್ಧಗಳನ್ನು ಓದಲು ಬರೆಯಲು ತಿಳಿದರಷ್ಟೇ ಶಿಕ್ಷಣವಲ್ಲ. ಶಾಲೆಗೇ ಹೋಗದವರು ವ್ಯವಹಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ವ್ಯವಹಾರ ಜಾಣ್ಮೆಯನ್ನು ಕಲಿತುಕೊಂಡು ವ್ಯವಹಾರದಲ್ಲಿ ಪ್ರಗತಿ ಸಾಧಿಸಿದರೆ ಒಂದು ಹಂತದಲ್ಲಿ ಯಶಸ್ವಿಯಾದಂತೆ. ಸ್ವಾವಲಂಬನೆಯ ಮೂಲಕ ಆರ್ಥಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಉಳಿತಾಯ ಮನೋಭಾವ ಬೆಳೆಯಬೇಕು. ಕೇವಲ ಶಿಕ್ಷಣ ಮಾತ್ರವಲ್ಲ ವ್ಯವಹಾರ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾವೃದ್ದಿ ಯೋಜನೆಯ ಆಶಯವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ತಲ್ಲೂರು ಶ್ರೀ ಶೇಷ ಕೃಷ್ಣ ಕನ್ವೆನ್ಷನ್ ಹಾಲ್‍ನಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಕುಂದಾಪುರ ಮತ್ತು ಬೈಂದೂರು ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕುಂದಾಪುರ ಮತ್ತು ಬೈಂದೂರು ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕುಂದಾಪುರ ತಾಲೂಕು ಮತ್ತು ಬೈಂದೂರು ತಾಲೂಕು ಇದಕ್ಕೆ ಪ್ರತ್ಯೇಕವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಯೋಜನೆಯ ಕೌಶಲ್ಯಾಭಿವೃದ್ದಿ ತರಬೇತಿಯಿಂದ ಪ್ರೇರಣೆಗೊಂಡು ಸ್ವ-ಉದ್ಯೋಗ ಮಾಡುವ ಆಸಕ್ತ ಪಾಲುದಾರ ಸದಸ್ಯರಿಗೆ ದ್ವಿ ಚಕ್ರ ಮತ್ತು ಆಟೋ ರಿಕ್ಷಾಗಳ ವಿತರಣೆ ಹಾಗೂ ಪ್ರೇರಣಾ ಶಿಬಿರವನ್ನು ಉದ್ಘಾಟಿಸಿ, ವಾಹನಗಳ ಕೀ ಹಸ್ತಾಂತರಿಸಿ ಮಾತನಾಡಿದರು.
ಸಿ.ಎ ಪರೀಕ್ಷೆಯಲ್ಲಿ ದೇಶಕ್ಕೆ 21ನೇ ರ್ಯಾಂಕ್ ಗಳಿಸಿದ ವೈಷ್ಣವಿಯವರನ್ನು ಅಭಿನಂದಿಸಲಾಯಿತು.

ಕುಂದಾಪುರ ತಾ.ಪಂ.ಅಧ್ಯಕ್ಷೆ ಶ್ಯಾಮಲ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ನಿರ್ಗಮನ ಅಧ್ಯಕ್ಷರಾದ ಬಿ.ಅಪ್ಪಣ್ಣ ಹೆಗ್ಡೆ ಅವರಿಗೆ ಹೆಗ್ಗಡೆಯವರು ಗೌರವಾರ್ಪಣೆ ಮಾಡಿದರು. ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜು ದೇವಾಡಿಗ ಸಹಕಾರ ಕೋರಿದರು. ಜಿ.ಪಂ.ಸದಸ್ಯೆ ಜ್ಯೋತಿ, ಉಡುಪಿ ಜಿಲ್ಲೆ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ, ತಾ.ಪಂ.ಸದಸ್ಯ ಕರಣ್ ಪೂಜಾರಿ, ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಬಿಲ್ಲವ, ಕೊಲ್ಲೂರು ಮೂಕಾಂಬಿಕಾ ದೇವಳದ ಟ್ರಸ್ಟಿ ರಾಜೇಶ ಕಾರಂತ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *