Header Ads
Header Ads
Breaking News

ಮಧುಕರ್ ಶೆಟ್ಟಿ ಓರ್ವ ಮಾದರಿ ಅಧಿಕಾರಿ: ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ 

ಕುಂದಾಪುರ: ಅದ್ಭುತ ಬರಗಾರ ರಘುರಾಮ ಶೆಟ್ಟರ ಪುತ್ರ ಮಧುಕರ್ ಶೆಟ್ಟಿ ಇಡೀ ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಮತ್ತು ಜನಸಾಮಾನ್ಯರಲ್ಲಿ ಆತ್ಮಸ್ಥೈರ್ಯ ತುಂಬಿದ ಮೇದಾವಿ ಅಧಿಕಾರಿ ಎಂದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಧುಕರ್ ಶೆಟ್ಟಿ ರಾಜ್ಯ ಕಂಡ ಓರ್ವ ದಕ್ಷ ಪೊಲೀಸ್ ಅಧಿಕಾರಿ. ಅವರ ತಂದೆ ವಡ್ಡರ್ಸೆ ರಘುರಾಮ ಶೆಟ್ಟರು ಈ ರಾಜ್ಯದ ಅಪರೂಪದ ಪತ್ರಕರ್ತರಾಗಿದ್ದವರು. ಮಧುಕರ್ ಶೆಟ್ಟರ ಅಕಾಲಿಕ ಮರಣ ಇಡೀ ಪೊಲೀಸ್ ಇಲಾಖೆಗೆ ಮಾತ್ರವಲ್ಲ, ಪ್ರಾಮಾಣಿಕತೆ ಮತ್ತು ದಕ್ಷತೆ ಬಯಸುವ ರಾಜ್ಯದ ಜನರಿಗೆ ನೋವು ತಂದಿದೆ. ಅವರ ಕುಟುಂಬಕ್ಕೆ ಅಗಲಿಕೆಯ ದುಖಃವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು.
ಕರಾವಳಿಯ ಹಲವು ಬಿಜೆಪಿ ಶಾಸಕರು ಅಂತಿಮ ನಮನ ಸಲ್ಲಿಸಲು ಗೈರಾದ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆ ನನಗೆ ಸಾವಿನ ಸುದ್ದಿ ತಿಳಿಯಿತು. ಹಾಗಾಗಿ ಇಂದು ಇಲ್ಲಿಗೆ ಬಂದು ಅಂತಿಮ ನಮನ ಸಲ್ಲಿಸಿದ್ದೇನೆ. ಬೇರೆಯವರು ಯಾಕೆ ಗೈರಾಗಿದ್ದಾರೆಂಬ ಮಾಹಿತಿ ಇಲ್ಲ ಎಂದು ಕೋಟ ಪ್ರತಿಕ್ರಿಯಿಸಿದರು.

Related posts

Leave a Reply