Header Ads
Header Ads
Breaking News

ಮಧುಮೇಹ ಮತ್ತು ಬೊಜ್ಜು ಬಗ್ಗೆ ಆರೋಗ್ಯ ಶಿಬಿರ

ಮಂಗಳೂರಿನ ತಲಪಾಡಿ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಶಾರದಾ ಆಯುರ್ವೇದ ಆಸ್ಪತ್ರೆ ವತಿಯಿಂದ ಮಧುಮೇಹ ಮತ್ತು ಬೊಜ್ಜು ಬಗ್ಗೆ ಆರೋಗ್ಯ ಶಿಬಿರವನ್ನು ನಗರದ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾನಿಲಯ ಸಭಾಂಗಣದಲ್ಲಿ ಜರುಗಿತ್ತು.


 ಮಂಗಳೂರಿನ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾನಿಲಯ ಸಭಾಂಗಣದಲ್ಲಿ ಮಧುಮೇಹ ಮತ್ತು ಬೊಜ್ಜು ಬಗ್ಗೆ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು ಶಿಬಿರವನ್ನು ಸಂಸ್ಥೆ ಅಧ್ಯಕ್ಷ ಪ್ರೋ ಎಂ.ಬಿ.ಪುರಾಣಿಕ್ ಅವರು ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು, ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಮಾತ್ರವಲ್ಲದೇ ಭಾರತೀಯ ಆಯುರ್ವೇದ ಚಿಕಿತ್ಸಾ ಪದ್ಧತಿ, ಯೋಗ, ಆಚರಣೆಗಳ ಬಗ್ಗೆ ತಿರುಗಿ ನೋಡುವ ಪರಿಸ್ಥತಿ ನಿರ್ಮಾಣವಾಗಿದೆ. ಹೀಗಾಗಿ ನಾವೆಲ್ಲರೂ ಹೆಮ್ಮೆ ಪಡುವ ಅಗತ್ಯವಿದೆ ಎಂದು ತಿಳಿಸಿದರು.

ಪ್ರಖ್ಯಾತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯರಾದ ಡಾ| ರಫಿಕ್ ಮಹಮ್ಮದ್ ಮಾತನಾಡಿ, ಶಿಕ್ಷಣ ಸಂಸ್ಥೆ ಸಾಮಾಜಿಕ ಕಳಕಳಿ ಹೊಂದಿಕೊಂಡು ಕೆಲಸ ಮಾಡುತ್ತಿದೆ. ಸೇವಾ ಮನೋಭಾವ ಇಟ್ಟು ಇತಂಹ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಅಂತಾ ಹೇಳಿದರು.
ಈ ವೇಳೆ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸ ಆಸ್ಪತ್ರೆಯ ವೈದ್ಯರಾದ ಡಾ| ರಾಜೇಶ್ ಪಾದೇಕಲ್ಲ್ , ಶಾರದಾ ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಡಾ| ರವಿಗಣೇಶ್ , ಎಸ್‌ಕೆಡಿಬಿ ಅಸೋಸಿಯೇಶನ್ ಅಧ್ಯಕ್ಷ ಪ್ರಭಾಕರ್ ರಾವ್ ಪೇಜಾವರ, ಪ್ರೋ ಎಂ.ಬಿ.ಪುರಾಣಿಕ್ ಅವರ ಪತ್ನಿ ಸುನಂದ ಪುರಾಣಿಕ್, ಶಾರದಾ ವಿದ್ಯಾನಿಲಯದ ಉಪ ಪ್ರಾಂಶುಪಾಲರಾದ ದಯಾನಂದ್ ಕಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತಿರಿದ್ದರು.
ನುರಿತ ವೈದ್ಯರಿಂದ ಉಪನ್ಯಾಸ- ತಪಾಸಣೆ ಹಾಗೂ ಚಿಕಿತ್ಸೆ , ರಿಯಾಯಿತಿ ದರದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಮಧುಮೇಹ ಹಾಗೂ ಬೊಜ್ಜು ಸಮಸ್ಯೆಗೆ ಮುಖ್ಯವಾಗಿ ಬೇಕಾದ ಆಹಾರ ತಯಾರಿ ವಿಧಾನ ಹಾಗೂ ಸವಿಯು ಅವಕಾಶ ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

Related posts

Leave a Reply

Your email address will not be published. Required fields are marked *