Header Ads
Breaking News

ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್(ರಿ) ನಿಂದ ಮಧುಮೇಹ ಮುಕ್ತ ಭಾರತ ಅಭಿಯಾನ ಶಿಬಿರ

ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್(ರಿ) ಮತ್ತು ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಗಂಜಿಮಠ ಇದರ ಜಂಟಿ ಸಹಯೋಗದಲ್ಲಿ ಮಧುಮೇಹ ಮುಕ್ತ ಭಾರತ ಅಭಿಯಾನ ಜುಲೈ 3, 2016ರಿಂದ ಆರಂಭಿಸಲಾಗಿದ್ದು, ಈವರೆಗೆ ಮಧುಮೇಹದ ಜಾಗೃತಿಯ ಸುಮಾರು 25ಕ್ಕೂ ಅಧಿಕ ಮಧುಮೇಹ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆಯ ಡಾ. ಸತೀಶ್ ಹೇಳಿದ್ರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಧುಮೇಹ ಕುರಿತು ಜಾಗೃತಿಗಾಗಿ ಚಿತ್ರಕಲಾ ಸ್ಪರ್ಧೆ, ಉಚಿತ ಮಧುಮೇಹ ತಪಾಸಣಾ ಶಿಬಿರ, ಮಧುಮೇಹ ಕವಿಗೋಷ್ಠಿ, ಮಧುಮೇಹದ ಮಾಧ್ಯಮಗೋಷ್ಠಿ, ಹಾಗೂ ವಿಚಾರಗೋಷ್ಠಿಯ ಮುಖಾಂತರ ಮಧುಮೇಹದ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂಬುದಾಗಿ ತಿಳಿಸಿದ್ರು.

ಇನ್ನು ಡಾ. ರಾಘವೇಂದ್ರ ಪ್ರಸಾದ್ ಮಾತನಾಡಿ, ಇತ್ತೀಚಿಗೆ ನಡೆದ ಸರ್ವೇಕ್ಷಣೆಯ ಪ್ರಕಾರ, ಭಾರತ ದೇಶದಲ್ಲಿ 50ಶೇ ಜನರಿಗೆ ಅವರಿಗೆ ಡಯಾಬಿಟಿಸ್ ಇದೆ ಅನ್ನೋದೆ ಗೊತ್ತಿಲ್ಲ. ಹಾಗಾಗಿ ಅವರಿಗೆ ಆಸ್ಪತ್ರೆಯ ವೈದ್ಯಕೀಯ ಪರೀಕ್ಷೆ ನಡೆಸಿ ಡಯಾಬಿಟಿಸ್ ಇದೆ ಅನ್ನೋದನ್ನು ಮನವರಿಕೆ ಮಾಡುವ ಕಾರ್ಯ ಆಗ್ಬೇಕಾಗಿದೆ. ಈ ಉದ್ದೇಶದಿಂದ ಇಂತಹ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂಬುದಾಗಿ ತಿಳಿಸಿದ್ರು. ಈ ಸಂದರ್ಭ ಸೌಜನ್ಯ ಸತೀಶ್ ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *