Breaking News

ಮಧ್ಯ ಪ್ರದೇಶ ರೈತರ ಪ್ರತಿಭಟನೆ, ಭೋಪಾಲ್‌ಗೂ ಹಬ್ಬಿದ ಹಿಂಸಾಚಾರ

ಮಂದಸೌರ್ ಜಿಲ್ಲೆಯಲ್ಲಿನ ರೈತರ ಪ್ರತಿಭಟನೆ ಕಾವು ಈಗ ರಾಜಧಾನಿ ಭೋಪಾಲ್ಗೂ?ವ್ಯಾಪಿಸಿದೆ; ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಆಕ್ರೋಶಗೊಂಡ ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದರು.
ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ ಪೊಲೀಸರು ೨೭ ಮಂದಿಯನ್ನು ಬಂಧಿಸಿದರು. ಪ್ರತಿಭಟನೆ ನಡೆಸುತ್ತಿದ್ದ ಸ್ಥಳದ ಸಮೀಪ ಕೆಲವು ಅಪರಿಚಿತ ವ್ಯಕ್ತಿಗಳು ಟ್ರಕ್ಗೆ ಬೆಂಕಿ ಹಚ್ಚಿದರು. ಮತ್ತೆ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಆಗ ಲಾಠಿ ಪ್ರಹಾರ ನಡೆಸಲಾಯಿತು ಎಂದು ಡಿ‌ಐಜಿ ರಮಣ್ ಸಿಂಗ್ ಸಿಕರ್ವಾರ್ ತಿಳಿಸಿದರು. ಕಳೆದ ಒಂಬತ್ತು ದಿನಗಳಿಂದ ಮಧ್ಯ ಪ್ರದೇಶದ ಪಶ್ಚಿಮ ಭಾಗದಲ್ಲಿ ರೈತರು ಸಾಲಮನ್ನಾ ಮತ್ತು ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂದಸೌರ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಪೋಲಿಸರು ನಡೆಸಿದ ಗೋಲಿಬಾರ್ನಲ್ಲಿ ಆರು ಮಂದಿ ಸಾವಿಗೀಡಾಗಿದ್ದರು.
ಗಲಭೆ ಪೀಡಿತ ಮಂದಸೌರ್ ಜಿಲ್ಲೆಯ ಬಡಾವನ್ ಗ್ರಾಮದಲ್ಲಿ ಶುಕ್ರವಾರ ಮತ್ತೊಬ್ಬ ರೈತ ಮೃತಪಟ್ಟಿದ್ದಾನೆ. ಪೊಲೀಸರ ಏಟಿನಿಂದಾಗಿಯೇ ರೈತ ಘನಶ್ಯಾಮ ಧಾಕಡ್ ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದರು. ಘನಶ್ಯಾಮ್ ಗುರುವಾರ ಸಂಜೆ ದೇವಾಲಯಕ್ಕೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಪೊಲೀಸರು ಆತನನ್ನು ತಡೆಹಿಡಿದು ಹೊಡೆದಿದ್ದಾರೆ. ಇಂದೋರ್ನ ಎಂವೈ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಆತ ಮೃತಪಟ್ಟ ಎಂದು ಹೇಳಿದರು.

Related posts

Leave a Reply