Header Ads
Header Ads
Breaking News

ಮಧ್ಯ ಮಾರಾಟದಲ್ಲಿ ಹಾಟ್ -ಬಿಯರ್ ಗಲಾಟೆ: ಬಿಯರ್ ಬೇಕು ಅಂತಾರೆ ಬಾರ್ ಮಾಲಕರು, ವಿಸ್ಕಿ ಮಾರಿ ಅನ್ನುತ್ತೆ ಅಬಕಾರಿ ಇಲಾಖೆ

ಅಬಕಾರಿ ಇಲಾಖೆ ಹಾಟ್ ಹಾಟ್ ಆಗಿದೆ. ಮಳೆಗಾಲ ಮುಗಿತು! ಕಡು ಬೇಸಗೆ ಶುರುವಾಗಿದೆ. ಮಧ್ಯಪ್ರಿಯರು ಚಿಲ್ಡ್ ಬಿಯರ್ ಮೊರೆ ಹೋಗ್ತಿದ್ದಾರೆ. ಆದ್ರೆ ಉಡುಪಿಯಲ್ಲಿ ಬಿಯರ್ ಗೆ ಕೃತಕ ಅಭಾವ ಸೃಷ್ಟಿಯಾಗಿದೆ. ವಿಸ್ಕಿ, ಬ್ರಾಂಡಿ, ರಮ್ ಮೊದಲಾದ ಲಿಕ್ಕರ್‌ಗಳನ್ನು ಹೆಚ್ಚು ಮಾರಾಟ ಮಾಡಿ ಅನ್ತಿರೋ ಅಬಕಾರಿ ಇಲಾಖೆ, ನೋ ಬಿಯರ್ ಬೋರ್ಡ್ ಹಾಕಿದೆ. ಬಾರ್ ಮಾಲಕರು ಅಬಕಾರಿ ಇಲಾಖೆ ಧೋರಣೆ ವಿರುದ್ಧ ಧ್ವನಿ ಎತ್ತಿದ್ದಾರೆ.ಉಡುಪಿಯಲ್ಲಿ ಅಬಕಾರಿ ಇಲಾಖೆ ಮತ್ತು ಮಧ್ಯ ಮಾರಾಟಗಾರರಿಗೆ ಜಟಾಪಟಿ ನಡಿತಾ ಇದೆ. ಮಧ್ಯದಂಗಡಿಯವರು ಗೋಡೌನ್ ಗೆ ಹೋಗಿ ಬಿಯರ್ ಕೊಡಿ ಅಂದ್ರೆ, ಅಬಕಾರಿ ಇಲಾಖೆ ಗ್ರಾಹಕರಿಗೆ ಹಾಟ್ ಕುಡಿಸಿ ಅಂತಿದೆ. ಕರಾವಳಿಯಲ್ಲಿ ಈಗ ಭಯಂಕರ ಸೆಖೆ. ಚಿಲ್ಡ್ ಬಿಯರ್ ಕುಡಿಯೋಣ ಅಂತ ಮಧ್ಯಪ್ರಿಯರು ಬಯಸೋದು ಸಹಜ. ಅವರಿಗೆ ನಾವು ವಿಸ್ಕಿ ಕುಡಿಸೋಕಾಗುತ್ತಾ? ಅನ್ನೋದು ಬಾರ್ ಮಾಲಕರ ಅಳಲು. ಇದೇ ಕಾರಣಕ್ಕೆ ಅಬಕಾರಿ ಇಲಾಖೆ ಮತ್ತು ಮದ್ಯ ಮಾರಾಟಗಾರರ ಮಧ್ಯೆ ಮುಸುಕಿನ ಗುದ್ದಾಟಕ್ಕೆ ನಡೆಸ್ತಾ ಇದೆ. ಅಬಕಾರಿ ಇಲಾಖೆಗೆ ಸರ್ಕಾರದಿಂದ ಲಿಕ್ಕರ್ ಮಾರಾಟಕ್ಕೆ ಹೆಚ್ಚಿನ ಒತ್ತಡ ಇರುವುದರಿಂದ ಎಷ್ಟು ಲಿಕ್ಕರ್ ಖರೀದಿ ಮಾಡುತ್ತಾರೋ ಅಷ್ಟೇ ಪ್ರಮಾಣದ ಬಿಯರ್ ನೀಡ್ತೇವೆ ಎಂದು ಕಂಡೀಷನ್ ಹಾಕಿದೆ.ಬಾರ್ ಮಾಲಕರು ಬಿಯರ್ ಗೆ ನಕಲಿ ಬೇಡಿಕೆ ಸೃಷ್ಟಿಸ್ತಾರೆ ಅನ್ನೋದು ಅಬಕಾರಿ ಇಲಾಖೆಯ ಆರೋಪ. ತಿಂಗಳ ಕೊನೆ ವಾರದಲ್ಲಿ ಹೆಚ್ಚು ಬಿಯರ್ ಖರೀದಿಸಿದ್ರೆ, ಬಿಯರ್ ಕಂಪೆನಿಗಳು ಬಾರ್ ಮಾಲಕರಿಗೆ ಹೆಚ್ಚಿನ ಲಾಭಾಂಶ ಮತ್ತು ಕೊಡುಗೆ ನೀಡುತ್ತವೆ. ಈ ಕಾರಣದಿಂದ ಮಾಸಾಂತ್ಯದಲ್ಲಿ ಎಲ್ಲಾ ಮದ್ಯ ಮಾರಾಟಗಾರರು ಬಿಯರ್ ಖರೀದಿಗೆ ಮುಗಿ ಬೀಳುತ್ತಾರೆ ಎಂಬುದು ಅಬಕಾರಿ ಇಲಾಖೆಯ ಅಧಿಕಾರಿಗಳ ವಾದ. ನಿಗದಿತ ಪ್ರಮಾಣದ ಲಿಕ್ಕರ್ ಮಾರಾಟ ಆಗದೆ ಹೋದ್ರೆ ರಾಜ್ಯದ ಬೊಕ್ಕಸಕ್ಕೆ ನಷ್ಟ ಆಗುತ್ತೆ. ಹೀಗಾಗಿ ಇದನ್ನ ಸರಿಪಡಿಸೋಕೆ ಬಿಯರ್ ಸರಭರಾಜು ಕಡಿತ ಮಾಡಲಾಗ್ತಿದೆ , ಅಬಕಾರಿ ಇಲಾಖೆ.ಆದರೆ ಇದನ್ನು ಒಪ್ಪಲು ಬಾರ್ ಮಾಲಕರು ತಯಾರಿಲ್ಲ.ಇಲಾಖೆಗೆ ಹಾಟ್ ಹಾಟ್ ಮಾಲು ಸೇಲು ಮಾಡುವ ತವಕ, ವೈನ್ ಮರ್ಚಂಟ್ ಗಳಿಗೆ ಬಿಯರ್ ಮಾರಿ ಹೆಚ್ಚು ಲಾಭ ಮಾಡುವ ಆಸೆ. ಹೀಗಾಗಿ ಇಲಾಖೆ ಮತ್ತು ವೈನ್ ಮರ್ಚಂಟ್‌ಗಳ ಮುಸುಕಿನ ಗುದ್ದಾಟದಲ್ಲಿ ಕೃತಕ ಬಿಯರ್ ಕೊರತೆ ಉಂಟಾಗಿದೆ

Related posts

Leave a Reply