Header Ads
Header Ads
Breaking News

ಮನಪಾ ವ್ಯಾಪ್ತಿಯಲ್ಲಿದೆ ಕುಲಗೆಟ್ಟ ನೆಲ್ಲಿಕಾಯಿ ರಸ್ತೆ, ಅನುದಾನ ಬಿಡುಗಡೆಯಾದ್ರೂ ತೇಪೆ ಕಾರ್ಯ ಆಗಿಲ್ಲ


ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಂಚಾರಕ್ಕೆ ಆಯೋಗ್ಯವಾಗಿವೆ. ಮನಪಾ ವ್ಯಾಪ್ತಿಯಲ್ಲಿ ಬರುವ ನೆಲ್ಲಿಕಾಯಿ ರಸ್ತೆಯು ಹೊಂಡ ಗುಂಡಿಗಳಿಂದ ತುಂಬಿದ್ದು, ವಾಹನ ಸವಾರರು ಪರದಾಡುವಂತಿದೆ.
ಇದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನೆಲ್ಲಿಕಾಯಿ ರಸ್ತೆಯ ದುಸ್ಥಿತಿ. ರಸ್ತೆಯುದ್ದಕ್ಕೂ ಹೊಂಡ ಗುಂಡಿಗಳಿದ್ದು, ಪಾದಚಾರಿಗಳ ಸಹಿತ ವಾಹನ ಸವಾರರು ಎದ್ದುಬಿದ್ದು ಸಂಚರಿಸುವಂತ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ ಮೇಯರ್ ಆಗಿದ್ದ ಹರಿನಾಥ್ ಕಾಲದಲ್ಲಿ ಮಂಗಳೂರು ನಗರ ವ್ಯಾಪ್ತಿಯ ರಸ್ತೆಗಳಿಗೆ ತೇಪೆ ಹಾಕಲು ಒಂದು ಕಾಲು ಕೋಟಿ ರೂಪಾಯಿ ಬಿಡುಗಡೆಯಾಗಿದೆ.
ಮಂಗಳೂರು ನಗರದ ಹದಗೆಟ್ಟ ಎಲ್ಲಾ ರಸ್ತೆಗಳ ತೇಪೆ ಕಾರ್ಯ ಮುಗಿಸಲಾಗುವುದು ಎಂದು ಹೇಳಿದ್ದರು. ಆದರೆ ಇದೀಗ ಹಾಳಾದ ರಸ್ತೆ ಹಾಗೆಯೇ ಇದೆ. ಎಲ್ಲಿಯೂ ರಸ್ತೆಯ ತೇಪೆ ಕಾರ್ಯ ಹಾಕಿಲ್ಲ. ಅಲ್ಲದೆ ಮಂಜೂರಾದ ಹಣ ಎಲ್ಲಿ ಹೋಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಪ್ರಶ್ನಿಸಿದರು. ರಸ್ತೆ ಸಮಸ್ಯೆ ನೆಲ್ಲಿಕಾಯಿ ವಾರ್ಡ್‌ನ ಸಮಸ್ಯೆ ಮಾತ್ರವಲ್ಲ ಮಂಗಳೂರು ನಗರದ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು ತೀವ್ರ ತರದ ತೊಂದರೆಗಳಾಗಿದೆ. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಎಚ್ಚೆತ್ತು ಎಲ್ಲೆಲ್ಲಿ ರಸ್ತೆ ಸಮಸ್ಯೆ ಇದೆ ಅಂತಹ ರಸ್ತೆಗಳನ್ನು ಶೀಘ್ರದಲ್ಲಿ ಕಾಮಗಾರಿ ನಡೆಸಲಿ ಎಂಬುವುದೇ ನಮ್ಮ ಆಶಯ.

Related posts

Leave a Reply