Header Ads
Breaking News

ಮನಪಾ ವ್ಯಾಪ್ತಿಯಲ್ಲಿ ಬ್ಲಾಕ್ ಆಗಿದ್ದ ಡ್ರೈನೇಜ್‍ನ ಕ್ಲೀನಿಂಗ್ : ತಮ್ಮ ಸೇಫ್ಟಿಯನ್ನು ಲೆಕ್ಕಿಸದೇ ಸ್ವಚ್ಛತೆಯನ್ನು ಮಾಡುತ್ತಿರುವ ಪೌರಕಾರ್ಮಿಕರು

ದೇಶದೆಲ್ಲೆಡೆ ಕೊರೊನಾ ಮಹಾಮಾರಿ ವೈರಸ್‍ನಿಂದ ತಲ್ಲಣಗೊಂಡರೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ತಮ್ಮ ಸೇಫ್ಟಿಯನ್ನು ಲೆಕ್ಕಿಸದೇ ಬ್ಲಾಕ್ ಆಗಿದ್ದ ಡ್ರೈನೇಜ್‍ನ್ನು ಕ್ಲೀನ್ ಮಾಡುತ್ತಿರುವ ದೃಶ್ಯ ಮಂಗಳೂರಿನ ಶರವು ದೇವಸ್ಥಾನ ಸಮೀಪದ ರಸ್ತೆಯಲ್ಲಿ ಕಂಡುಬಂತು. ಕೊರೊನಾ ವೈರಸ್ ಮಹಾಮಾರಿಯಿಂದ ಎಲ್ಲೆಡೆ ಸ್ವಚ್ಛತೆಯನ್ನು ಕಾಪಾಡುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಸ್ವಚ್ಚತೆಯನ್ನು ಮಾಡುತ್ತಿದ್ದಾರೆ. ಇಲ್ಲೊಂದು ಬ್ಲಾಕ್ ಆಗಿದ್ದ ಡ್ರೈನೇಜ್‍ನ್ನು ಕೈಗೆ ಗ್ಲೌಸ್ ಇಲ್ಲದೆ, ಕಾಲಿಗೆ ಗಂ ಬೂಟ್‍ನ್ನು ಧರಿಸದೆ ಮುಖಕ್ಕೆ ಮಾಸ್ಕ್ ಹಾಕದೆ ಸ್ವಚ್ಛಗೊಳಿಸುತ್ತಿದ್ದರು. ಈ ದೃಶ್ಯ ಕಂಡುಬಂದಿರುವುದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ. ಪಾಲಿಕೆಯ ಪೌರ ಕಾರ್ಮಿಕರೇ ಬ್ಲಾಕ್ ಆಗಿದ್ದ ಡ್ರೈನೇಜ್‍ನ್ನು ಸ್ವಚ್ಛಗೊಳಿಸುತ್ತಿದ್ದರು. ಇದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ

Related posts

Leave a Reply

Your email address will not be published. Required fields are marked *