Header Ads
Header Ads
Breaking News

ಮನಪಾ ವ್ಯಾಪ್ತಿಯ ಸ್ಟರಕ್ ರಸ್ತೆ ಅಭಿವೃದ್ಧಿ ಪ್ರೀಮಿಯಂ ಎಫ್.ಎ.ಆರ್ ಅನುದಾನದಲ್ಲಿ ಕಾಮಗಾರಿ ಶಾಸಕ ಜೆ.ಆರ್. ಲೋಬೋರಿಂದ ಶಿಲಾನ್ಯಾಸ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಟರಕ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಸ್ಟರಕ್ ರಸ್ತೆ ಅಭಿವೃದ್ಧಿ ಪ್ರೀಮಿಯಂ ಎಫ್‌ಎ.ಆರ್. ಅನುದಾನದಲ್ಲಿ ಕಾಮಗಾರಿ ನಡೆಯಲಿದ್ದು, ಶಾಸಕ ಜೆ.ಆರ್. ಲೋಬೊ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸ್ಟರಕ್ ರಸ್ತೆಯನ್ನು ಪ್ರೀಮಿಯರ್ ಎಫ್‌ಎ‌ಆರ್ ಫಂಡನಲ್ಲಿ ಅಗಲೀಕರಣ ಮಾಡಲಾಗುತ್ತದೆ ಎಂದರು.

ಅನಂತರ ಪಾಲಿಕೆ ಮೇಯರ್ ಕವಿತಾ ಸನಿಲ್ ಮಾತನಾಡಿ ಒಂದು ಕೋಟಿ ತೊಂಬತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದೆ. ಎಲ್ಲಾ ಕಡೆ ಸಾರ್ವಜನಿಕರು ರಸ್ತೆ ಅಗಲೀಕರಣಕ್ಕೆ ಸಹಕರಿಸಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಕಾರ್ಪೊರೇಟರ್ ಎ.ಸಿ. ವಿನಯರಾಜ್ ಮಾತನಾಡಿ, ಸ್ಟರಕ್ ರಸ್ತೆ ಅಭಿವೃದ್ಧಿಯ ಕೆಲಸ ಇವತ್ತು ನನಸಾಗಿದೆ. ಮಳೆ ನೀರು ಹೋಗುವ ಚರಂಡಿ, ಫುಟ್‌ಪಾತ್ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭ ಪಾಲಿಕೆಯ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿಯ ಅಧ್ಯಕ್ಷೆ ನಾಗವೇಣಿ ಹಾಗೂ ಕಾಂಗ್ರೆಸ್ ಮುಖಂಡರು ಹಾಜರಿದ್ದರು.