Header Ads
Header Ads
Breaking News

ಮನುಷ್ಯನ ಜೀವನ ಬೀಜವಿದ್ದಂತೆ ನಾವು ಜೀವನದಲ್ಲಿ ಉತ್ತಮವಾದ ಬೀಜವನ್ನೇ ಬಿತ್ತಬೇಕು : ಯೋಗ ಗುರು ಬಾಬಾರಾಮ್ ದೇವ್

ಬಂಟ್ವಾಳ: ಮನುಷ್ಯನ ಜೀವನ ಬೀಜವಿದ್ದಂತೆ. ನಮ್ಮೊಳಗೆ ಒಳ್ಳೆದು ಕೆಟ್ಟದು ಎರಡೂ ಇದೆ. ನಾವು ಜೀವನದಲ್ಲಿ ಉತ್ತಮವಾದ ಬೀಜವನ್ನೇ ಬಿತ್ತಬೇಕು, ಕೆಟ್ಟದ್ದನ್ನು ನಾಶ ಮಾಡಬೇಕು ಅದುವೇ ಜೀವನದ ಪುರುಷಾರ್ಥ ಎಂದು ಪತಂಜಲಿ ಯೋಗ ಗುರು ಬಾಬಾರಾಮ್ ದೇವ್ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು. ನಾವು ಮಾಡುವ ಕೆಲಸವನ್ನು ನಿಷ್ಠೆಯಿಂದ, ಅತ್ಯುತ್ತಮವಾಗಿ ಮಾಡಬೇಕು, ಆಗ ರಾಷ್ಟ್ರ ಮಾತ್ರವಲ್ಲ, ವಿಶ್ವವೇ ನಮಗೆ ಗೌರವ ನೀಡುತ್ತದೆ ಎಂದರು. ಕಳೆದ 40 ವರ್ಷದಿಂದ ನಾನು ರಜೆ ಪಡೆದುಕೊಂಡಿಲ್ಲ, ನನಗೆ ದಿನಲೂ ಕೆಲಸ ಮಾಡುವುದೆಂದರೆ ತುಂಬಾ ಉತ್ಸಾಹ, ಆದ್ದರಿಂದ ನಾನು ಖುಷಿಯಾಗಿರುತ್ತೇನೆ ಎಂದು ತಿಳಿಸಿದರು. ಬಳಿಕ ಶಿಶುಮಂದಿರಕ್ಕೆ ತೆರಳಿ ಅಲ್ಲಿ ಪುಟಾಣಿ ಮಕ್ಕಳ ಚಟುವಟಿಕೆಯನ್ನು ಕಂಡು ಖುಷಿ ಪಟ್ಟರು. ವೇದವ್ಯಾಸ ಮಂದಿರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯರ ದಾಂಡೀಯ ನೃತ್ಯವನ್ನು ವೀಕ್ಷಿಸಿದರು.

Related posts

Leave a Reply

Your email address will not be published. Required fields are marked *