Header Ads
Header Ads
Breaking News

ಮನುಷ್ಯನ ಬದುಕಿನಲ್ಲಿ ಹಾಸ್ಯ ಆಶಾವಾದವನ್ನು ಕಲಿಸುತ್ತದೆ- ಪ್ರೊ.ಭುವನೇಶ್ವರಿ ಹೆಗ್ಡೆ

ಸುಳ್ಯ:ಜೀವನವನ್ನು ಪ್ರೀತಿಸುವವರಿಗೆ ಹಾಸ್ಯ ಮುಖ್ಯ. ನಗುವನ್ನು ಹಂಚಿಕೊಂಡು ಬದುಕುವುದೇ ಉತ್ತಮ ಬದುಕು. ಜೀವನದಲ್ಲಿ ಯಾವುದೇ ಕಷ್ಟ-ಸುಖಗಳಿದ್ದರೂ ಹಾಸ್ಯ ಆಶಾವಾದವನ್ನು ಕಲಿಸುತ್ತದೆ ಎಂದು ಉಪನ್ಯಾಸಕಿ ಹಾಗೂ ಹಿರಿಯ ಹಾಸ್ಯ ಲೇಖಕಿ ಪ್ರೊ.ಭುವನೇಶ್ವರಿ ಹೆಗ್ಡೆ ಹೇಳಿದರು.
ಅವರು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಆಶ್ರಯದಲ್ಲಿ ಸುಳ್ಯ ಅಂಬೆಟಡ್ಕ ಕನ್ನಡ ಭವನದಲ್ಲಿ ನಡೆದ ದಿ.ಕುರುಂಜಿ ಮಾಲಿಂಗ ಮಾಸ್ತರ್ ದತ್ತಿನಿದಿ ಕಾರ್ಯಕ್ರಮದಲ್ಲಿ ಬದುಕಿನ ಹಾಸ್ಯ ಸಲ್ಲಾಪ ಉಪನ್ಯಾಸ ನೀಡಿ ಮಾತನಾಡಿದರು.ಕೃಷಿ ಸಜ್ಜನಿಕೆಯನ್ನು ಕಲಿಸುತ್ತದೆ. ಪ್ರಕೃತಿ ನಡುವೆ ಇರುವವರಿಗೆ ಪ್ರಕೃತಿ ಪ್ರೀತಿ-ಪ್ರೇಮವನ್ನು ಕಲಿಸಿಕೊಡುತ್ತದೆ. ಕರಾವಳಿಯಲ್ಲಿ ಹಾಸ್ಯಕ್ಕೆ ಕನ್ನಡದ ಜತೆಗೆ ತುಳುಭಾಷೆಯೂ ಮತ್ತಷ್ಟು ಗಟ್ಟಿತನವನ್ನು ಕೊಟ್ಟಿದೆ. ಜೀವನದಲ್ಲಿ ಹಾಸ್ಯಪ್ರಜ್ಞೆ ಇಲ್ಲದ ವ್ಯಕ್ತಿದ ಸಮಾಜದಲ್ಲಿ ಯಾವುದೇ ಗೌರವ ಸಿಗಲು ಅಸಾಧ್ಯ. ಇಂದಿನ ಯುವ ಸಮುದಾಯ ಸಾಹಿತ್ಯದ ಮೂಲಕ ಕನ್ನಡವನ್ನು ಉಳಿಸಲು ಪಣತೊಡಬೇಕು ಎಂದು ಹೇಳಿದರು. ಕಾರ್ಯಕ್ರಮವನ್ನು ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸಿ ಮಾತನಾಡಿ, ವೈದ್ಯಕೀಯ ರಂಗದಲ್ಲೂ ಕನ್ನಡ ತನ್ನದೇ ಆದ ಚಾಪನ್ನು ಮೂಡಿಸಿದೆ. ಸುಳ್ಯದಲ್ಲಿ ಕನ್ನಡ ಕ್ಲಬ್ ರಚನೆ ಮೂಲಕ ಇನ್ನಷ್ಟೂ ಕಾರ್ಯಕ್ರಮಗನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹರಪ್ರಸಾದ್ ವಹಿಸಿದರು. ಮುಖ್ಯಅತಿಥಿಗಳಾಗಿ ತಾಲೂಕು ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಮೀನಾಕ್ಷಿ ಗೌಡ ಮೇರ್ಕಜೆ, ಸಾಹಿತ್ಯಪರಿಷತ್ ಜಿಲ್ಲಾ ಸದಸ್ಯೆ ಲೀಲಾ ದಾಮೋಧರ, ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ಚಂದ್ರಶೇಖರ ಪೇರಾಲು, ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ ಉಪಸ್ಥಿತರಿದ್ದರು.
ವರದಿ: ಪದ್ಮನಾಭ ಸುಳ್ಯ

Related posts

Leave a Reply

Your email address will not be published. Required fields are marked *