Header Ads
Header Ads
Breaking News

ಮನುಷ್ಯ ಸ್ವಾರ್ಥ ಮತ್ತು ಅಗತ್ಯತೆಯ ನಡುವೆ ಬದುಕುತ್ತಿದ್ದಾನೆ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಅಭಿಪ್ರಾಯ

ಬಂಟ್ವಾಳ: ಮನುಷ್ಯ ಸ್ವಾರ್ಥ ಮತ್ತು ಅಗತ್ಯತೆಯ ನಡುವೆ ಬದುಕುತ್ತಿದ್ದಾನೆ. ಸ್ವಾರ್ಥಕ್ಕಾಗಿ ತನ್ನ ಅಗತ್ಯತೆಯನ್ನು ನಾಶ ಮಾಡುತಿದ್ದಾನೆ , ಇದು ಅಪಾಯಕಾರಿ ಬೆಳವಣಿಗೆ ಎಂದು ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಹೇಳಿದರು.ಅವರು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ, ಸಾಮಾಜಿಕ ಅರಣ್ಯ ಇಲಾಖೆ ಆಶ್ರಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಮಾತನಾಡಿದರು. ಗುಡ್ಡ ಜರಿತ ಮೊದಲಾದ ಪ್ರಾಕೃತಿಕ ನಾಶಕ್ಕೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದೇ ಕಾರಣ. ಆದ್ದರಿಂದ ಎಲ್ಲರು ಗಿಡಗಳನ್ನು ನೆಟ್ಟು ಮರಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಶಾಲಾ ಸಂಚಾಲಕ ಜೆ.ಪ್ರಹ್ಲಾದ್ ಶೆಟ್ಟಿ ಮಾತನಾಡಿ, ಪ್ರತಿವರ್ಷ ಅನೇಕ ಗಿಡಗಳನ್ನು ನಾವು ನೆಡುತ್ತೇವೆ ಆದರೆ ಪೋಷಣೆಯ ಕೊರತೆಯಿಂದ ನೆಟ್ಟ ಗಿಡಗಳು ಎಲ್ಲವೂ ನಶಿಸಿ ಹೋಗುತ್ತಿವೆ, ಈ ಹಿನ್ನೆಲೆಯಲ್ಲಿ ಮಕ್ಕಳು ತಾವು ನೆಟ್ಟ ಗಿಡಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸುವಂತೆ ಕರೆ ನೀಡಿದರು. ಸಾಮಾಜಿಕ ಅರಣ್ಯ ಇಲಾಖಾ ಅಧಿಕಾರಿ ರಾಜೇಶ್ ವನಮಹೋತ್ಸವ ಆಚರಣೆಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಬಿ.ಎಸ್ ನಾಕ್, ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ರೋಟರಿ ಕ್ಲಬ್ ಸದಸ್ಯರಾದ ಪುಷ್ಪರಾಜ ಹೆಗ್ಡೆ, ಪ್ರಭಾಕರ ಪ್ರಭು, ಪದ್ಮ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್ ಪಿ.ಸಲ್ದಾನ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply