Header Ads
Breaking News

ಮನೆಗಳನ್ನು ಕೇಂದ್ರೀಕರಿಸಿ ಕಳ್ಳತನ ನಡೆಸುವ ತಂಡ : ಮಂಜೇಶ್ವರ ಹಾಗೂ ಕುಂಜತ್ತೂರು ಪರಿಸರಗಳಲ್ಲಿ ಸಕ್ರೀಯ

ಮಂಜೇಶ್ವರ: ಹಗಲು ವೇಳೆ ತಿರುಗಾಡಿಕೊಂಡು ಮನೆಗಳನ್ನು ಕೇಂದ್ರೀಕರಿಸಿಕೊಂಡು ಕಳ್ಳತನ ನಡೆಸುತ್ತಿರುವ ತಂಡ ಮಂಜೇಶ್ವರ ಹಾಗೂ ಕುಂಜತ್ತೂರು ಪರಿಸರಗಳಲ್ಲಿ ಸಕ್ರಿಯವಾಗಿದೆ.

ಜನ ವಾಸವಿಲ್ಲದ ಮನೆಗಳನ್ನು ಪತ್ತೆ ಹಚ್ಚಿ ಬೀಗಗಳನ್ನು ಮುರಿದು ಕಳವು ನಡೆಸುತ್ತಿರುವ ತಂಡ ವ್ಯಾಪಕವಾಗಿದೆ. ಸಂಶಯಾಸ್ಪದವಾಗಿ ತಿರುಗಾಡುತ್ತಿರುವವರನ್ನು ಕಂಡರೆ ಕೂಡಲೇ ಪೊಲೀಸ್ರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.ಇದೀಗ ಕುಂಜತ್ತೂರು ಪದವು ನಿವಾಸಿ ಅಹ್ಮದ್ ಭಾವ ಎಂಬವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಪಾಟುಗಳನ್ನು ಮುರಿದು ಚೆಲ್ಲಾಪಿಲ್ಲಿಗೊಳಿಸಿ ಅದರೊಳಗಿದ್ದ ಬೆಳ್ಳಿ ಆಭರಣ ಹಾಗೂ ನಗದನ್ನು ಕೊಂಡೊಯ್ದಿದ್ದಾರೆ. ಕುಟುಂಬ ಹಳೆಯ ಮನೆಯಿಂದ ಹೊಸ ಮನೆಗೆ ತೆರಳಿ ಬರುವ ಒಂದೂವರೆ ತಾಸಿನೊಳಗೆ ಕಳ್ಳರು ಈ ಕೃತ್ಯವನ್ನು ನಡೆಸಿದ್ದಾರೆ. ಮಂಜೇಶ್ವರ ಪೆÇಲೀಸರು ಸ್ಥಳಕ್ಕಾಗಮಿಸಿ ಪ್ರಾಥಮಿಕ ತನಿಖೆ ನಡೆಸಿ ಅಲ್ಲಿ ಪತ್ತೆಯಾದ ರಾಡನ್ನು ಕೊಂಡು ಹೋಗಿದ್ದಾರೆ.

Related posts

Leave a Reply

Your email address will not be published. Required fields are marked *