Header Ads
Header Ads
Header Ads
Breaking News

ಮನೆಗೆ ಆಕಸ್ಮಿಕ ಬೆಂಕಿ ಲಕ್ಷಾಂತರ ರೂಪಾಯಿ ನಷ್ಟ ಬಂಟ್ವಾಳದ ಜಾರಂದಗುಡ್ಡೆಯಲ್ಲಿ ಘಟನೆ

ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆ ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಇಲ್ಲಿನ ಮೀನಾಕ್ಷಿ ಎಂಬವರ ಮನೆಯಲ್ಲಿ ಈ ದುರ್ಘಟನೆ ನಡೆದಿದ್ದು ನಗದು ಹಣ ಸಹಿತ ಅಪಾರ ಸೊತ್ತುಗಳು ಬೆಂಕಿಗೆ ಆಹುತಿಯಾಗಿದೆ. ಮೀನಾಕ್ಷಿಯವರು ಹೊಸ ಮನೆ ನಿರ್ಮಿಸುತ್ತಿದ್ದು ವಾಸ್ಯವ್ಯಕ್ಕಾಗಿ ಅದರ ಪಕ್ಕವೇ ಸಿಮೆಂಟ್ ಶೀಟ್ ಹಾಸಿ ಜೋಪಡಿಯೊಂದನ್ನು ನಿರ್ಮಿಸಿ ಎಲ್ಲಾ ಸಾಮಾಗ್ರಿಗಳನ್ನು ಅದರಲ್ಲಿಟ್ಟಿದ್ದಾರೆ. ಹೊಸ ಮನೆ ಕಾಮಗಾರಿ ನಡೆಯುತ್ತಿರುವುದರಿಂದ ಮುಂಭಾಗದ ಮನೆಯಲ್ಲಿ ರಾತ್ರಿ ಉಳಿದುಕೊಳ್ಳುತ್ತಿದ್ದಾರೆ. ಮಂಗಳವಾರ ರಾತ್ರಿ 12 ಗಂಟೆಯ ವೇಳೆಗೆ ಜೋಪಡಿಗೆ ಆಕಸ್ಮಿಕವಾಗಿ ಬೆಂಕಿ ಹಚ್ಚಿಕೊಂಡಿದೆ.

ಮುಂಭಾಗದ ಮನೆಯವರು ಎದ್ದು ನೋಡಿದಾಗ ಬೆಂಕಿ ಉರಿಯುತ್ತಿರುವುದು ಕಂಡು ಬಂದಿತ್ತು. ತಕ್ಷಣ ಎಲ್ಲರೂ ಸೇರಿ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಅದಾಗಲೇ ಕಪಾಟು ಸಹಿತ ಅನೇಕ ಸಾಮಾಗ್ರಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಮನೆ ನಿರ್ಮಾಣ ಕಾರ್ಮಿಕರಿಗೆ ವೇತನ ನೀಡಲು ಕಪಾಟಿನ ಲಾಕರ್‌ನಲ್ಲಿದ್ದ 80 ಸಾವಿರ ನಗದು, ಪರ್ಸಿನಲ್ಲಿದ್ದ 3 ಸಾವಿರ ರೂಪಾಯಿ ನಗದು ಸೇರದಂತೆ ಅಗತ್ಯ ದಾಖಲೆಗಳು, ಬಟ್ಟೆಬರೆಗಳು ಸಂಪೂರ್ಣ ಸುಟ್ಟು ಹೋಗಿದೆ. ಗ್ಯಾಸ್ ಸಿಲಿಂಡರ್ ಅಲ್ಲೇ ಇದ್ದು ಅದಕ್ಕೆ ಬೆಂಕಿ ಹಚ್ಚಿಕೊಳ್ಳುವ ಮುನ್ನವೇ ಮನೆ ಮಂದಿ ಅದನ್ನು ತೆರವುಗೊಳಿಸಿರುವುದರಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

Leave a Reply