Breaking News

ಮನೆಗೆ ನುಗ್ಗಿದ ಲಾರಿ

ಉಳ್ಳಾಲ:  ಚಾಲಕನ ನಿಯಂತ್ರಣ ತಪ್ಪಿದ ಲಾರಿ  ಮನೆಯೊಳಗೆ ನುಗ್ಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ  ತೊಕ್ಕೊಟ್ಟು ಸೇವಂತಿಗುಡ್ಡೆ ಎಂಬಲ್ಲಿ  ಬುಧವಾರ ಸಂಜೆ ವೇಳೆ ಸಂಭವಿಸಿದ್ದು, ಘಟನೆಯಲ್ಲಿ  ಮನೆಯೊಳಗಿದ್ದ ಮಹಿಳೆ ಗಾಯಗೊಂಡರೆ ವೃದ್ಧೆ ಹಾಗೂ ಮಕ್ಕಳು ಪವಾಡಸದೃಶವಾಗಿ  ಪಾರಾಗಿದ್ದಾರೆ.

ಸೇವಂತಿಗುಡ್ಡೆಯ ರಾಜೇಂದ್ರ ಎಂಬವರ ಮನೆಯಲ್ಲಿ ಅವಘಢ ಸಂಭವಿಸಿದೆ.  ಅವರ ಪತ್ನಿ ಲಲಿತಾ (35) ಎಂಬವರಿಗೆ ಗಾಯವಾಗಿದ್ದು, ತೊಕ್ಕೊಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಘಟನೆ ವೇಳೆ ಮಕ್ಕಳಾದ ದೀಪಿಕಾ  ದೀಪಿಕಾ, ಯೋಗೀಶ್ ಹಾಗೂ ಹಿರಿಯ ವೀರಮ್ಮ  ಎಂಬವರು ಘಟನೆ ವೇಳೆ ನೆರೆಮನೆಯಲ್ಲಿದ್ದುದರಿಂದಾಗಿ ಪವಾಡಸದೃಶವಾಗಿ  ಪಾರಾಗಿದ್ದಾರೆ.ನೆರೆಮನೆಯ ಅಶ್ರಫ್ ಎಂಬವರ ಮನೆ  ಕೆಲಸ ನಿರ್ವಹಿಸುವ ಸಂದರ್ಭ ಮಣ್ಣು ಹೇರಿಕೊಂಡು ತೆರಳುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ, ಎದುರುಗಡೆ  ಇಳಿಜಾರು  ಪ್ರದೇಶದಲ್ಲಿದ್ದ  ಮನೆಯ  ಅಂಗಳಕ್ಕೆ ಇಳಿದು ಹಿಂಬದಿಯ ಗೋಡೆಗೆ ಢಿಕ್ಕಿ ಹೊಡೆದು ಒಳನುಗ್ಗಿದೆ. ಪರಿಣಾಮ ಮನೆ  ಭಾಗಶ: ಹಾನಿಗೀಡಾಗಿದೆ. ಅಡಿಗೆ ಮನೆಯಲ್ಲಿದ್ದ ಸೊತ್ತು,  ಹೆಂಚು ಸಂಪೂರ್ಣ ಹಾನಿಗೀಡಾಗಿ  ಲಕ್ಷಾಂತರ ರೂ ನಷ್ಟ  ಸಂಭವಿಸಿದೆ. ಸ್ಥಳಕ್ಕೆ  ಉಳ್ಳಾಲ ನಗರಸಭೆ  ಪೌರಾಯುಕ್ತೆ  ವಾಣಿ ಆಳ್ವ,  ಸ್ಥಳೀಯ ಕೌನ್ಸಿಲರ್ ಉಸ್ಮಾನ್ ಕಲ್ಲಾಪು, ಬಿಜೆಪಿ ಮುಖಂಡ ಚಂದ್ರಶೇಖರ್ ಉಚ್ಚಿಲ್  ಭೇಟಿ ನೀಡಿ  ಮನೆಮಂದಿಯನ್ನು ವಿಚಾರಿಸಿದರು.  ಉಳ್ಳಾಲ ಪೊಲೀಸರು  ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Related posts

Leave a Reply