Header Ads
Header Ads
Breaking News

ಮನೆಯೊಂದರಲ್ಲಿ ಒಂಟಿ ಮಹಿಳೆಯ ಬರ್ಬರ ಹತ್ಯೆ .ಕಾರ್ಕಳದ ಕುಕ್ಕುಂದೂರಿನಲ್ಲಿ ನಡೆದ ಘಟನೆ.

ಕಾರ್ಕಳ: ಕುಕ್ಕುಂದೂರು ಅಯ್ಯಪ್ಪ ನಗರದ ಕೆರ್ತಾಡಿಯ ಮನೆಯೊಂದರಲ್ಲಿ ವಾಸ್ತವ್ಯ ಇದ್ದ ಮಹಿಳೆಯೊಬ್ಬಳು ಬರ್ಬರ ರೀತಿಯಲ್ಲಿ ಕೊಲೆಗೀಡಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಫ್ಲೋರಿನಾ ಮಚೋಡಾ ಅಲಿಯಾಸ್ ಫ್ಲೋರಿನಾ ಡಿಸೋಜಾ(54) ಎಂಬವರು ನಿಗೂಢ ರೀತಿಯಲ್ಲಿ ಕೊಲೆಗೀಡಾದ ಮಹಿಳೆಯಾಗಿದ್ದಾರೆ. ಮಾಳ ಹುಕ್ರಟ್ಟೆಯ ನಿವಾಸಿ ಅಂತೋನಿ ಡಿಸೋಜಾ ಎಂಬವರೊಂದಿಗೆ ಈಕೆಗೆ ವಿವಾಹವಾಗಿ ಸಂಸಾರ ನಡೆಸಿದ ಫಲವಾಗಿ ಅರುಣ್(20), ಕಿರಣ್(16) ವಯಸ್ಸಿನ ಗಂಡು ಮಕ್ಕಳಿಬ್ಬರಿದ್ದಾರೆ. ದಂಪತಿಗಳ ನಡುವೆ ವಿರಸ ಉಂಟಾಗಿ ವಿವಾದವು ಕಾರ್ಕಳ ಗ್ರಾಮಾಂತರ ಠಾಣೆಯ ಮೆಟ್ಟಲೇರಿದ್ದು, ಕಳೆದ ಮೂರು ವರ್ಷಗಳಿಂದ ಇಬ್ಬರಿಬ್ಬರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.ಜಿಮ್ ಉದ್ಯಮ ಆರಂಭಿಸಿದ ಮಹಿಳೆ ನಗರದ ಬಸ್ ನಿಲ್ದಾಣ ಪರಿಸರದಲ್ಲಿ ಪಾಲುದಾರಿಕೆಯಲ್ಲಿ ಜಿಮ್ ತರಬೇತಿ ಕೇಂದ್ರವನ್ನು ಫ್ಲೋರಿನಾ ಆರಂಭಿಸಿದ್ದಾರೆ. ಪಾಲುದಾರಿಕೆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ನಡೆದಿತ್ತೆನ್ನಲಾಗಿದ್ದು, ಅದೇ ಕಾರಣದಲ್ಲಿ ಪಾಲುದಾರರೊಂದಿಗೆ ಕೂಡಾ ಫ್ಲೋರಿನಾಳಿಗೆ ಅಷ್ಟಕಷ್ಟೇ ಎಂಬ ವಿಚಾರವು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಚರ್ಚ್‌ಗೆ ಹೋಗಿಲ್ಲ ದೇವರ ಪಾದ ಸೇರಿದಳು ಪ್ರತಿ ರವಿವಾರದಂದು ಪ್ರಾರ್ಥನೆಗೈದು ಫ್ಲೋರಿನಾ ಚರ್ಚ್‌ಗೆ ತೆರಳುವ ವಾಡಿಕೆ ಮಾಡಿದ್ದಳು. ರವಿವಾರ ಬೆಳಿಗ್ಗೆ ಸಂಬಂಧಿಕರು ಮನೆಗೆ ಬಂದಾಗ ಆಕೆಯ ಮನೆಯ ಚಿಲಕ ಹಾಕಿಕೊಂಡಿತ್ತು. ಚರ್ಚ್‌ಗೂ ಬಾರದೇ ಇದ್ದುದನ್ನು ಗಮನಿಸಿದ ಸಂಬಂಧಿಕರು ಮತ್ತೇ ಅವರ ಮನೆಯ ಕಡೆಗೆ ಬಂದಾಗ ಮನೆಯ ಬಾಗಿಲು ತೆರೆದು ಕೊಂಡಿತ್ತು. ಅವರು ಉಪಯೋಗಿಸುತ್ತಿದ್ದ ದ್ವಿಚಕ್ರ ವಾಹನವು ಅಲ್ಲಿರಲಿಲ್ಲ. ಮನೆಯೊಳಗೆ ಹೆಣವಾಗಿ ಫ್ಲೋರಿನಾ ಮಲಗಿದ್ದರು.ಪ್ರಕರಣದ ಬಗ್ಗೆ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ತನಿಖೆಗೆ ಅದೇಸ ನೀಡಿದ್ದಾರೆ. ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳ ಅಗಮಿಸಿದೆ.

Related posts

Leave a Reply