Header Ads
Breaking News

ಮನೆಯ ಮುಂದೆ ಕಿಡಿಗೇಡಿಗಳ ವಾಮಾಚಾರ .ತೆಂಗಿನ ಕಾಯಿ, ಮೊಳೆ ಚುಚ್ಚಿದ ಲಿಂಬೆ ಹಣ್ಣು, ಕುಂಕುಮ, ಹೂ ಪತ್ತೆ

ಬಂಟ್ವಾಳದ ಬಿ.ಮೂಡ ಗ್ರಾಮದ ಪರ್ಲಿಯಾ ನಿವಾಸಿ ಇಕ್ಬಾಲ್ ಎಂಬವರ ಮನೆಯ ಮುಂದೆ ಕಿಡಿಗೇಡಿಗಳು ವಾಮಾಚಾರ ನಡೆಸಿದ ಘಟನೆಯೊಂದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮನೆಯ ಗೇಟಿನ ಮುಂಭಾಗ ಬಟ್ಟೆಯೊಂದರ ಮೇಲೆ ತೆಂಗಿನ ಕಾಯಿ, ಮೊಳೆ ಚುಚ್ಚಿದ ಲಿಂಬೆ ಹಣ್ಣು ಕುಂಕುಮ, ಹೂ ಪತ್ತೆಯಾಗಿದ್ದು ವಾಮಚಾರ ನಡೆಸಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಲಾಗಿದೆ. ಬಂಟ್ವಾಳ ಪುರಸಭೆಯ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಇಕ್ಬಾಲ್ ಪರ್ಲಿಯಾ ಅವರು ಪಕ್ಷವೊಂದರ ಟಿಕೇಟ್ ಆಕಾಂಕ್ಷಿ ಎನ್ನಲಾಗಿದೆ. ಇದೇ ಕಾರಣಕ್ಕೆ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಆರೋಪಿಸಲಾಗಿದೆ. ಗೇಟ್ ಬಳಿ ಇದ್ದ ವಾಮಚಾರದ ವಸ್ತುಗಳನ್ನು ಬಳಿಕ ತೆರವುಗೊಳಿಸಲಾಗಿದೆ.

Related posts

Leave a Reply