Header Ads
Header Ads
Breaking News

ಮನೆ ಕುಸಿದು ಬಿದ್ದು ಮಹಿಳೆ ಸಾವು

ಮೂಡುಬಿದರೆ ವ್ಯಾಪ್ತಿಯ ಕಡಂದಲೆ ಬಿ.ಟಿ ರೋಡ್ ಎಂಬಲ್ಲಿ ಮನೆ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಡಂದಲೆ ನಿವಾಸಿ ಮೀನಾಕ್ಷಿ ಗೌಡ (65) ಮೃತಪಟ್ಟ ಮಹಿಳೆ. ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಗೆ ಸಂಬಂಧಿಸಿದ ಕಟ್ಟಡ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ಮೀನಾಕ್ಷಿ ಅವರು ಕೆಲವು ದಿನಗಳಿಂದ ಕಾರಣಾಂತರದಿಂದ ತನ್ನ ಮಗನ ಮನೆಯಿಂದ ಬೇರ್ಪಟ್ಟು ಕಡಂದಲೆ ಬಿ.ಟಿ ರೋಡ್ ನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಶಾಲೆಗೆ ಸಂಬಂಧಪಟ್ಟ ಕಟ್ಟಡ ಇದಾಗಿದ್ದು ಶಿಥಿಲಾವಸ್ಥೆಯಲ್ಲಿತ್ತು. ಭಾನುವಾರ ಬೆಳಿಗ್ಗೆ ಕಟ್ಟಡದ ಗೋಡೆ ಹಾಗೂ ಮೇಲ್ಚಾವಣಿ ಕುಸಿದು ಬಿದ್ದಿದ್ದು ಈ ಸಂದರ್ಭ ಕೋಣೆಯ ಒಳಗಿದ್ದ ಮೀನಾಕ್ಷಿ ಮೃತಪಟ್ಟಿದ್ದಾರೆ.
ವರದಿ: ಪ್ರೇಮಶ್ರೀ ಮೂಡುಬಿದರೆ

Related posts

Leave a Reply

Your email address will not be published. Required fields are marked *