Header Ads
Header Ads
Breaking News

ಮನೆ ಮನೆಗೆ ಕಾಂಗ್ರೆಸ್ ಪಜೀರ್ ಎರಡನೇ ವಾರ್ಡ್‌ನಲ್ಲಿ ಮನೆಗೆ ಭೇಟಿ

ಉಳ್ಳಾಲ: ಮನೆ ಮನೆಗೆ ಕಾಂಗ್ರೆಸ್ ಮೂಲಕ ಮನ ಮನಸ್ಸಿಗೆ ಕಾಂಗ್ರೆಸ್ ಕೊಂಡೊಯ್ಯುವ ಪ್ರಯತ್ನವನ್ನು ಕಾರ್‍ಯಕರ್ತರು ಮಾಡುತ್ತಿದ್ದಾರೆ ಎಂದು ಡಿಸಿಸಿ ಪ್ರಧಾನ ಕಾರ್‍ಯದರ್ಶಿ ಉಮರ್ ಪಜೀರ್ ಹೇಳಿದ್ದಾರೆ.

ಅವರು ಪಜೀರು ಎರಡನೇ ವಾರ್ಡಿನಲ್ಲಿ ಹಮ್ಮಿಕೊಳ್ಳಲಾದ ಕಾಂಗ್ರೆಸ್ ಮನೆ ಮನೆಗೆ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಿದ್ಧರಾಮಯ್ಯ ಸರಕಾರದ 4.5 ವರ್ಷಗಳ ಕಾರ್ಯಸಾಧನೆ ಜನರ ಮುಂದಿಡುವ ಕಾರ್ಯಕ್ರಮ ವಿಶಿಷ್ಟವಾಗಿದೆ. ಸರಕಾರದ ಜನಪರ ಯೋಜನೆಗಳನ್ನು ಒಳಗೊಂಡ ಕಿರುಪುಸ್ತಕವನ್ನು ಮನೆ ಮನೆ ತಲುಪಿಸುವ ಪ್ರಯತ್ನವಾಗಿದೆ.

ಚುನಾವಣೆ ಸಂದರ್ಭ ಪ್ರಣಾಳಿಕೆಯಲ್ಲಿ ಘೋಷಿಸಿದಂತಹ ಎಲ್ಲಾ ಕಾರ್ಯಕ್ರಮಗಳನ್ನು ರಾಜ್ಯ ಸರಕಾರ ಅನುಷ್ಠಾನಗೊಳಿಸುವ ಮೂಲಕ ರಾಜ್ಯದಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಿದೆ ಎಂದರು. ಈ ವೇಳೆ ಡಿಸಿಸಿ ಪ್ರಧಾನ ಕಾರ್‍ಯದರ್ಶಿ ಉಮರ್ ಪಜೀರ್, ಪಜೀರ್ ಗ್ರಾ.ಪಂ ಅಧ್ಯಕ್ಷ ಸೀತಾರಾಮ ಶೆಟ್ಟಿ, ಸದಸ್ಯರಾದ ರಫೀಕ್ ಪಜೀರ್, ಇಮ್ತೀಯಾಝ್ ಮುಂತಾದವರು ಉಪಸ್ಥಿತರಿದ್ದರು.