Header Ads
Header Ads
Breaking News

ಮನೆ ಮೇಲೆ ತಡೆಗೋಡೆ ಬಿದ್ದು ವೃದ್ಧೆ, ಮೊಮ್ಮಗ ಮೃತ್ಯು . ಪುತ್ತೂರಿನ ಹೆಬ್ಬಾರಬೈಲಿನಲ್ಲಿ ಹೃದಯವಿದ್ರಾವಕ ಘಟನೆ

ಪುತ್ತೂರು: ರಾತ್ರಿ ಗಾಡ ನಿದ್ರೆಯ ಸಮಯ ಮನೆ ಮೇಲೆ ಭಾರಿ ಗಾತ್ರದ ತಡೆಗೋಡೆಯೊಂದು ಬಿದ್ದು ಮಲಗಿದ್ದ ವೃದ್ದೆ ಮತ್ತು ಮೊಮ್ಮಗ ಮೃತಪಟ್ಟ ಹೃದಯವಿದ್ರಾವಕ ಘಟನೆ ಪುತ್ತೂರಿನ ಹೆಬ್ಬಾರಬೈಲಿನಲ್ಲಿ ನಿನ್ನೆ ತಡ ರಾತ್ರಿ ಸುಮಾರು 2.30ಕ್ಕೆ ನಡೆದಿದೆ.ಹೆಬ್ಬಾರಬೈಲು ನಿವಾಸಿ ಕೊಡಿಪ್ಪಾಡಿಯಲ್ಲಿ ವಿಶ್ವಾಸ್ ಹೊಟೇಲ್ ನಡೆಸಿಕೊಂಡಿದ್ದು ಇತ್ತೀಚೆಗೆ ನಿಧನರಾದ ವಿಶ್ವನಾಥ್ ಸಾಲಿಯಾನ್ ಅವರ ಪತ್ನಿ ಪಾರ್ವತಿ ಮತ್ತು ಅವರ ಮೊಮ್ಮಗ ಧನುಷ್ ಧಾರಣುವಾಗಿ ಮೃತಪಟ್ಟವರು.

ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಪಕ್ಕದ ಭಾರಿ ಎತ್ತರದ ತಡೆಗೋಡೆಯೊಂದು ಕುಸಿದು ವಿಶ್ವನಾಥ್ ಸಾಲಿಯಾನ್ ಅವರ ಮನೆಯ ಮೇಲೆ ಬಿದ್ದಿದೆ. ಈ ಸಂದರ್ಭ ಮನೆಯ ಒಂದು ಕೊಠಡಿಯಲ್ಲಿ ಪಾರ್ವತಿ ಮತ್ತು ಅವರ ಮೊಮ್ಮಗ ಮಲಗಿದ್ದರು. ತಡೆಗೋಡೆ ಅವರ ಮನೆಗೆ ಬಿದ್ದ ಪರಿಣಾಮ ಮನೆ ಕುಸಿದು ಕೊಠಡಿಯಲ್ಲಿ ಮಲಗಿದ್ದ ಪಾರ್ವತಿ ಮತ್ತು ಅವರ ಮೊಮ್ಮಗನ ಮೇಲೆ ಬಿದ್ದಿದೆ. ಸಂಪೂರ್ಣ ಮಣ್ಣಿನಲ್ಲಿ ಹೂತುಹೋಗಿದ್ದ ಅವರಿಬ್ಬರನ್ನು ತಕ್ಷಣ ಮನೆ ಮಂದಿ ಮತ್ತು ಸ್ಥಳೀಯರು ಹಾಗೂ ನಗರಸಭೆ ಕಾರ್ಯಾಚರಣೆ ನಡೆಸಿ ಹೊರಗೆಯುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ನಗರಸಭೆ ವಾಹನದಲ್ಲೇ ಅವರನ್ನು ಪಕ್ಕದ ಆದರ್ಶ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರಿಬ್ಬರು ಮೃತಪಟ್ಟಿದ್ದರು. ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರ ಕೊಠಡಿಯಲ್ಲಿ ಇರಿಸಲಾಗಿದೆ.

Related posts

Leave a Reply