Header Ads
Breaking News

ಮನ್‌ದೀಪ್ ಸಿಂಗ್ ಹ್ಯಾಟ್ರಿಕ್ ಗೋಲು, ಭಾರತಕ್ಕೆ ಅಜ್ಲಾನ್ ಷಾ ಹಾಕಿಯಲ್ಲಿ ಜಯ

ತಂಡ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಛಲದಿಂದ ಹೋರಾಡಿ ಹ್ಯಾಟ್ರಿಕ್’ ಗೋಲಿನ ಸಾಧನೆ ಮಾಡಿದ ಸ್ಟ್ರೈಕರ್ ಮನದೀಪ್ ಸಿಂಗ್ ಅವರ ಕೆಚ್ಚೆದೆಯ ಆಟದ ಬಲದಿಂದಾಗಿ ಭಾರತ ತಂಡ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಜಯದ ಸಿಹಿ ಸವಿಯಿತು.
ಭಾರತ ೪-೩ ಗೋಲುಗಳಿಂದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ತನಗಿಂತಲೂ ಕೆಳಗಿನ ಸ್ಥಾನ ಹೊಂದಿರುವ ಜಪಾನ್ ತಂಡದ ಸವಾಲು ಮೀರಿ ನಿಂತಿತು. ಮಲೇಶಿಯಾದ ಇಪೋದಲ್ಲಿ ಇದರೊಂದಿಗೆ ಪೂರ್ಣ ಪಾಯಿಂಟ್ ಹೆಕ್ಕಿರುವ ತಂಡ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ಆಸೆಗೆ ಬಲ ತುಂಬಿ ಕೊಂಡಿದೆ. ಆಡಿರುವ ನಾಲ್ಕು ಪಂದ್ಯ ಗಳಿಂದ ತಂಡ ಏಳು ಪಾಯಿಂಟ್ಸ್ ಸಂಗ್ರಹಿಸಿದೆ. ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ದಿಟ್ಟ ಆಟವಾಡಿದರೂ ಹಾಲಿ ಚಾಂಪಿ ಯನ್ ಆಸ್ಟ್ರೇಲಿಯಾಕ್ಕೆ ಮಣಿದಿದ್ದ ಭಾರತ ತಂಡ, ಜಪಾನ್ ವಿರುದ್ಧದ ಪೈಪೋಟಿಯಲ್ಲಿ ಶುರುವಿನಿಂದಲೇ ಚುರುಕಿನ ಆಟ ಆಡಿ ಗಮನ ಸೆಳೆಯಿತು. ಚೆಂಡು ಹೆಚ್ಚು ಸಮಯ ತಮ್ಮ ಬಳಿಯೇ ಇರುವಂತೆ ನೋಡಿಕೊಂಡ ಭಾರತದ ಆಟಗಾರರು ಪದೇ ಪದೇ ಜಪಾನ್ ರಕ್ಷಣಾ ಕೋಟೆಯ ಮೇಲೆ