Header Ads
Header Ads
Breaking News

ಮರದ ತುಂಡುಗಳಿಂದ “ಗಿಟಾರ್” ರಚನೆ.ಮಂಗಲ್ಪಾಡಿಯಲ್ಲೊಬ್ಬ ಅಪರೂಪದ ಕಲಾವಿದ.

ಮಂಜೇಶ್ವರ: ಮರದ ತುಂಡುಗಳಿಂದ ಗಿಟಾರ್ ನಿರ್ಮಿಸಿ ಗಮನ ಸೆಳೆಯುತಿದ್ದಾರೆ ಮಂಗಲ್ಪಾಡಿ ನಿವಾಸಿ ಕೃಷ್ಣ ಎಂಬವರು. ಸಣ್ಣದಿರುವಾಗಲೇ ಗಿಟಾರಿನೊಂದಿಗಿದ್ದ ಆಸಕ್ತಿಯೇ ಇವರನ್ನು ಗಿಟಾರ್ ನಿರ್ಮಾಣಕ್ಕೆ ಪ್ರೇರೇಪಿಸಿದೆ.ಸಣ್ಣದಿರುವಾಗಲೇ ಗಿಟಾರನ್ನು ಅತಿ ಹೆಚ್ಚಾಗಿ ಇಷ್ಟ ಪಡುತಿದ್ದ ಕೃಷ್ಣ ಬಡಗಿಯ ಕೆಲಸದ ಮಧ್ಯೆ ಗಿಟಾರ್ ಸಂಗೀತ ಉಪಕರಣವನ್ನು ಉಪಯೋಗಿಸಲು ಕಲಿತು ಮುಂದಿನ ದಿನಗಳಲ್ಲಿ ಇದರ ನಿರ್ಮಾಣದ ಬಗ್ಗೆ ತಲೆ ಕೆಡೆಸಿಕೊಂಡ ಇವರು ಅದರಲ್ಲಿ ಭಾರೀ ಯಶಶ್ವನ್ನು ಕಂಡಿದ್ದಾರೆ.ಇದೀಗ ಗಿಟಾರ್ ನಿರ್ಮಿಸುವುದರಲ್ಲೂ ಅದೇ ರೀತಿ ಗಿಟಾರ್ ಬಾರಿಸುವುದರಲ್ಲೂ ಇವರು ಭಾರೀ ಚಾಣಕ್ಯತೆಯನ್ನು ಪಡೆದು ಎಲ್ಲರ ಗಮನ ಸೆಳೆಯುತಿದ್ದಾರೆ.

ಗಿಟಾರ್ ನ ಶಭ್ದವನ್ನು ಇಷ್ಟಪಡುತಿದ್ದ ಕೃಷ್ಣರವರು ಅಂದು ಕಾಸರಗೋಡಿನಲ್ಲಿ ಸೇಲ್ಸ್ ಟ್ಯಾಕ್ಸ್ ಅಧಿಕಾರಿಯಾಗಿದ್ದ ಹರಿನಾತ್ ಎಂಬವರತ್ತಿರ ತೆರಳಿ ಗಿಟಾರ್ ಬಾರಿಸುವುದನ್ನು ಕಲಿತಿರುವುದಾಗಿ ಅವರು ಹೇಳುತಿದ್ದಾರೆ.ಕಳೆದ40ವರ್ಷಗಳಿಂದ ಬಡಗಿಯ ಕೆಲಸದಲ್ಲಿ ನಿರತರಾಗಿರವ ಇವರು ಉಪ್ಪಳ ಮಂಗಲ್ಪಾಡಿ ಎಂಬಲ್ಲಿ ಕುಟುಂಬದೊಂದಿಗೆ ಜೀವನ ನಡೆಸುತ್ತಾ ಇದ್ದಾರೆ. ಧಾರ್ಮಿಕ ಸಮಾರಂಭಗಳಲ್ಲೂ ಕಾರ್ಯಕ್ರಮವನ್ನು ನೀಡುತ್ತಿರುವ ಇವರು ಕಾಸರಗೋಡಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಗಿಟಾರ್ ಬಾರಿಸುವುದನ್ನು ಕಲಿಸಿಕೊಡತಿದ್ದಾರೆ. ತಾನು ಕಲಿತ ವಿದ್ಯೆಯಿಂದ ಸಮಾಜಕ್ಕೇನಾದರೂ ಲಾಭವನ್ನು ದೊರಕಿಸುವ ಕೊಡುವ ಉದ್ದೇಶವನ್ನು ಕೂಡಾ ಇಟ್ಟುಕೊಂಡಿರುವುದು ಇವರ ವಿಶೇಷತೆಯಾಗಿದೆ.

Related posts

Leave a Reply