Header Ads
Header Ads
Breaking News

ಮರದ ರೆಂಬೆ ಮುರಿದು ಅಪಾಯ ತಪ್ಪಿಸಿದ ವಿದ್ಯುತ್ ಇಲಾಖೆ:ವಿ4 ನ್ಯೂಸ್ ವರದಿಗೆ ಎಚ್ಚೆತ್ತ ಅಧಿಕಾರಿಗಳು.

ಮಂಜೇಶ್ವರ : ಮಂಜೇಶ್ವರ ಗ್ರಾ. ಪಂ. ನ 20 ನೇ ವಾರ್ಡಿನ ಮಸ್ಜಿದುಲ್ ಹುದಾ ಪರಿಸರದಲ್ಲಿ ಮರದ ರೆಂಬೆಯೊಂದು ವಿದ್ಯುತ್ ತಂತಿಯ ಮೇಲೆ ಜೋತು ಬಿದ್ದಿದ್ದು ಜೋರಾದ ಗಾಳಿ ಬೀಸಿದರೆ ದುರಂತ ಸಂಭವಿಸಬಹುದು ಎಂಬ ಸ್ಥಳೀಯರ ಹೇಳಿಕೆಯನ್ನಾಧರಿಸಿ ವಿ೪ ನ್ಯೂಸ್ ಸಮಗ್ರವಾದ ವರದಿಯನ್ನು ಪ್ರಸಾರ ಮಾಡಿತ್ತು. ಇದರ ಪರಿಣಾಮವಾಗಿ ವಿದ್ಯುತ್ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಮುಂದಾಗುವ ಅನಾಹುತವನ್ನು ತಪ್ಪಿಸಿದ್ದಾರೆ.
ಹೌದು, ಈ ಕುರಿತು ವರದಿ ವಿ4 ನ್ಯೂಸ್‌ನಲ್ಲಿ ಬಿತ್ತರವಾದ ದಿನದಂದೇ ವರದಿಯ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಿದಾಡುತ್ತಿತ್ತು. ಕೊನೆಗೂ ಆ ವರದಿ ಸ್ಥಳೀಯರ ಮೂಲಕ ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೂ ತಲುಪಿತು.ಜೊತೆಗೆ ಸಾರ್ವಜನಿಕರು ಕೂಡಾ ನಿರಂತರವಾಗಿ ದೂರವಾಣಿ ಮೂಲಕ ವಿದ್ಯುತ್ ಇಲಾಖಾಯನ್ನು ಸಂಪರ್ಕಿಸಿ ವಿಚಾರಿಸತೊಡಗಿದ್ದರು. ಇದರಿಂದಾಗಿ ಕೂಡಲೇ ಎಚ್ಚೆತ್ತುಗೊಂಡ ವಿದ್ಯುತ್ ಇಲಾಖಾ ಅಧಿಕಾರಿಗಳು ಇದೀಗ ಸಿಬ್ಬಂದಿಗಳೊಡನೆ ಆಗಮಿಸಿ ತಾತ್ಕಲಿಕ ಸಂಪರ್ಕವನ್ನು ಕಡಿತಗೊಳಿಸಿ ತಂತಿಯ ಮೇಲಿದ್ದ ಮರದ ರೆಂಬೆಯನ್ನು ಮುರಿದು ಮುಂದಾಗುವ ಅಪಾಯವನ್ನು ತಪ್ಪಿಸಿದ್ದಾರೆ. ಇದೀಗ ಈ ಪ್ರದೆಶದ ಜನರು ನಿಟ್ಟುಸಿರು ಬಿಡುವಂತಾಗಿದೆ. ವಿ4 ನ್ಯೂಸ್‌ನ ವರದಿಗೆ ಎಚ್ಚೆತ್ತ ವಿದ್ಯುತ್ ಅಧಿಕಾರಿಗಳ ಸ್ಪಂಧನೆಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.

Related posts

Leave a Reply