Header Ads
Header Ads
Breaking News

ಮರಳಿನ ಸಮಸ್ಯೆಯಿಂದ ಬಳಲುತ್ತಿರುವ ಕಾರ್ಮಿಕರು || ಮತದಾನ ಬಹಿಷ್ಕಾರ ಮಾಡುವುದಾಗಿ ಜಿಲ್ಲಾಡಳಿತಕ್ಕೆ ಸೂಚನೆ

ಸುಮಾರು ಹತ್ತು ತಿಂಗಳಿನಿಂದ ಮರಳಿನ ಸಮಸ್ಯೆಯಿಂದ ಬಳಲುತ್ತಿದ್ದು ಸರಕಾರ ಹಾಗೂ ಜಿಲ್ಲಾಡಳಿತ ಹಾಗೂ ಜನಪ್ರತಿನಿದಿಗಳಿಂದ ಸೂಕ್ತ ಸ್ಪಂದನೆ ದೊರಯದೆ ಮರಳನ್ನೆ ನಂಬಿ ಜೀವಿಸುವ ನಮ್ಮನ್ನು ಕಡೆಗಣಿಸಿರುತ್ತಾರೆ. ಮಾರ್ಚ್ 14ರಂದು ನಡೆಯುವ ಸದಸ್ಯರ ಸಭೆಯಲ್ಲಿ ಜಿಲ್ಲಾಡಳಿತ ನಮ್ಮ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ನಾವು ನ್ಯಾಯ ಸಿಗುವವರೆಗೆ ಮತದಾನ ವನ್ನು ಬಹಿಷ್ಕರಿಸುತ್ತೇವೆ ಎಂದು ಲಾರಿ ಮತ್ತು ಟೆಂಪೋ ಮಾಲಕ ಚಾಲಕ ಸಂಘದ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರುಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೀತಿ ಸಂಹಿತೆಯಿಂದ ಮರಳು ಸಿಗುತ್ತಿಲ್ಲ ದಿನಕ್ಕೆ 5ರಿಂದ 10ಫೋನುಗಳು ಬರುತ್ತವೆ ಮರಳಿನ ಸಮಸ್ಯೆಯಿಂದಾಗಿ ನಾವು ಜೀವ್ ಕಳೆದುಕೊಳ್ಳುವಂತಾಗಿದೆ ಎಂದು ದು:ಖಿಸುತ್ತಿದ್ದಾರೆ ಎಂದು ಆರೋಪಿಸಿದರು. ಮರಳುಗಾರಿಕೆಯೇ ನಮ್ಮ ಜೀವನ ..ಮರಳನ್ನು ನಂಬಿ ಲಾರಿ ಟಿಪ್ಪರನ್ನು ಖರೀದಿಸಿದ್ದೇವೆ.ಈ ವಿಚಾರವಾಗಿ ಜಿಲ್ಲಾದಿಕಾರಿಯವರನ್ನು ಮಾತನಾಡಿದಾಗ ಸರಿಯಾದ ಉತ್ತರವನ್ನು ನೀಡಲಿಲ್ಲ ..ಈ ಕೆಲಸ ಬಿಟ್ಟು ಬೇರೆ ಕೆಲಸ ಮಾಡಿ ಎನ್ನುತ್ತಾರೆ ನಮಗೆ ಈ ಕೆಲಸ ಬಿಟ್ಟು ಬೇರೆ ಕಾರ್ಯ ತಿಳಿದಿಲ್ಲ
ಮತದಾನ ಬಹಿಷ್ಕಾರ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೆವೆ ಎಂದಿದ್ದಾರೆ. ಇದಕ್ಕೆ ನಮ್ಮ ಒಮ್ಮತವಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಉಡುಪಿ ಲಾರಿ ಮತ್ತು ಟ್ಂಪೋ ಸಮಿತಿಯ ಅಧ್ಯಕ್ಷ ಪ್ರವೀಣ್ ಸುವರ್ಣ, ಮರಳು ಹೋರಾಟ ಸಮಿತಿ ಉಡುಪಿ ಜಿಲ್ಲೆಯ ಅಧ್ಯಕ್ಷ ಸತ್ಯರಾಜ್ ಬಿರ್ತಿ, ಚಂದು ಪೂಜಾರಿ, ಅನ್ಸಾರ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *