Header Ads
Header Ads
Breaking News

ಮರಳುಗಾರಿಕೆಗೆ ಅವಕಾಶ ನೀಡದಿದ್ದರೆ ಹೋರಾಟ

ಅಕ್ಟೋಬರ್ 15ರೊಳಗೆ ಜಿಲ್ಲೆಯಲ್ಲಿ ಮರಳು ತೆಗೆಯುವ ಪ್ರಕ್ರೀಯೆಗೆ ಚಾಲನೆ ಸಿಗದಿದ್ದರೆ 16ರಂದು ಜಿಲ್ಲೆಯ ಎಲ್ಲಾ ಶಾಸಕರು , ಜನಪ್ರತಿನಿಧಿಗಳು ಚರ್ಚಿಸಿ ಹೋರಾಟ ಮಾಡುವ ಕುರಿತು ನಿರ್ದಾರ ತೆಗೆದುಕೊಳ್ಳಲಾವುದು ಎಂದು ಉಡುಪಿ ಬಿಜೆಪಿ ಜಿಲ್ಲಾದ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಹೇಳಿದ್ದಾರೆ.

ಸಿ.ಆರ್.ಜೆಡ್ ಹಾಗೂ ನಾನ್ ಸಿ.ಆರ್.ಜೆಡ್ ವ್ಯಾಪ್ತಿಯಲ್ಲಿ ಮರಳ ದಿಬ್ಬಗಳನ್ನು ಗುರುತಿಸಿ ಮರಳು ತೆಗೆಯಲು ಅವಕಾಶ ನೀಡುವುದಾಗಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಹಿಂದೆ ಭರವಸೆ ನೀಡಿತ್ತು. ಇದುವರೆಗೂ ಭರವಸೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಸಿ.ಆರ್.ಜೆಡ್ ವ್ಯಾಪ್ತಿಯಲ್ಲಿ ಮರಳು ತೆಗೆಯಲಾಗುತ್ತಿದೆ, ಆದರೆ ಉಡುಪಿಯಲ್ಲಿ ಮಾತ್ರ ವಿಳಂಬ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಆದೇಶ ಮಾಡಿದ ಮೇಲೂ ಮರಳು ತೆಗೆಯಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿರುವುದು ಏಕೆ ಎಂದು ಮಟ್ಟಾರು ಪ್ರಶ್ನಿಸಿದರು. ಜಿಲ್ಲಾಡಳಿತ ನಿಯಮಗಳನ್ನು ಗಾಳಿಗೆ ತೂರುವುದು ಬೇಡ.ರಾಷ್ಟ್ರೀಯ ಹಸಿರು ಪೀಠದ ನಿಯಮಗಳಿಗೆ ಬದ್ದವಾಗಿಯೇ ಮರಳು ತೆಗೆಯಲು ಕ್ರಮ ಕೈಗೊಳ್ಳಲಿ ಹಿಂದಿನಂತೆ ಸಾಂಪ್ರದಾಯಿಕವಾಗಿ ಮರಳು ತೆಗೆಯಲು ಅವಕಾಶ ನೀಡಲಿ ಎಂದು ಆಗ್ರಹಿಸಿದರು.

ವರದಿ:ಪಲ್ಲವಿ ಸಂತೋಷ್

Related posts

Leave a Reply