Header Ads
Header Ads
Breaking News

ಮರಳು ಮಾಫಿಯಾಕ್ಕೆ ಸಿಂಹಸ್ವಪ್ನ ಮಂಜೇಶ್ವರ ಹೊಸ ಎಸ್‌ಐ, ಎರಡು ತಿಂಗಳಲ್ಲಿ ಸರಕಾರಕ್ಕೆ ಅರ್ಧ ಕೋಟಿ ರೂ. ಲಾಭ

ಮಂಜೇಶ್ವರ ಪೊಲೀಸ್ ಠಾಣೆಯ ನೂತನ ಎಸ್ಸೈ ಅನೂಪ್ ಕುಮಾರ್ ಅಧಿಕಾರ ಸ್ವೀಕರಿಸಿದ ಕಳೆದ ಎರಡು ತಿಂಗಳಿಂದೀಚೆಗೆ ನೂರಕ್ಕೂ ಮಿಕ್ಕ ಅನಧಿಕೃತ ಮರಳು ಲಾರಿಗಳನ್ನು ವಶಕ್ಕೆ ತೆಗೆದು ಸರಕಾರದ ಬೊಕ್ಕಸಕ್ಕೆ ಅರ್ಧ ಕೋಟಿ ರೂ. ಗಿಂತಲೂ ಅಧಿಕ ಮೊತ್ತದ ಹಣವನ್ನು ಜಮಾ ಗೊಳ್ಳುವಂತೆ ಮಾಡಿದ್ದಾರೆ.
ಕರ್ನಾಟಕದಿಂದ ಅನಧಿಕೃತವಾಗಿ ಕಾಸರಗೋಡು ಭಾಗಕ್ಕೆ ಆಗಮಿಸುತ್ತಿರುವ ಮರಳು ಲಾರಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮರಳು ವಾಹನಗಳನ್ನು ವಶಕ್ಕೆ ಪಡೆದ ಬಳಿಕ ದಂಡದ ರೂಪದಲ್ಲಿ ಸರಕಾರಕ್ಕೆ ಅರ್ಧ ಕೋಟಿ ರೂ. ಗಿಂತಲೂ ಅಧಿಕ ಲಭಿಸಿದೆ. ರಾಜ್ಯದಲ್ಲೇ ದಂಡ ವಿಧಿಸಿ ಸರಕಾರದ ಬೊಕ್ಕಸಕ್ಕೆ ಅತೀ ಹೆಚ್ಚು ಲಾಭವನ್ನು ಗಿಟ್ಟಿಸಿದ ಏಕೈಕ ಠಾಣೆ ಎಂಬ ಹೆಗ್ಗಳಿಕೆಗೂ ಮಂಜೇಶ್ವರ ಠಾಣೆ ಅರ್ಹವಾಗಿದೆ. ಪೊಲೀಸರು ವಶಕ್ಕೆ ತೆಗೆದ ಮರಳು ಲಾರಿಗಳನ್ನು ಜಿಯೋಲಾಜಿ ಇಲಾಖೆಯಲ್ಲಿ ೫೫,೦೦೦ ರೂ. ದಂಡ ಪಾವತಿಸಿದ ಬಳಿಕ ವಾಹನವನ್ನು ಬಿಡುಗಡೆಗೊಳಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಷ್ಟೊಂದು ಮೊತ್ತ ಮಂಜೇಶ್ವರ ಠಾಣೆಯಿಂದ ಸರಕಾರಕ್ಕೆ ಲಭಿಸಿದೆ.
ನಕಲಿ ದಾಖಲೆ ಗಳನ್ನು ಸೃಷ್ಟಿಸಿ ಸಾಗಿಸಲಾಗುತ್ತಿರುವ ಮರಳಿನ ಹೊರತಾಗಿ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿರುವ ಅನಧಿಕೃತ ಕಡವುಗಳ ಮೂಲಕವೂ ಮರಳು ಸಾಗಾಟ ನಡೆಸಲಾಗುತ್ತಿದೆ. ಪೈವಳಿಕೆ ಜೋಡು ಕಲ್ಲು ಹೊಳೆಯಿಂದ ಅನಧಿಕೃತವಾಗಿ ಮರಳು ಸಾಗಾಟ ನಡೆಸುತ್ತಿರುವ ಮಧ್ಯೆ ಮಂಜೇಶ್ವರ ಠಾಣಾಧಿಕಾರಿ ಅನೂಪ್‌ರವರು ದಾಳಿ ನಡೆಸಿ ಇತ್ತೀಚೆಗೆ ಎರಡು ಟಿಪ್ಪರ್ ಲಾರಿಗಳನ್ನು ವಶಕೆ ತೆಗೆದಿದ್ದರು. ಹೊಳೆಯ ಮರಳಾದ ಕಾರಣ ಲಾರಿಯನ್ನು ಬಿಡಿಗಡೆಗೊಳಿಸಲು ಕೋರ್ಟು ಮೆಟ್ಟಲೇರುವುದರ ಜೊತೆಯಾಗಿ ಇಮ್ಮಡಿ ದಂಡ ಕೂಡಾ ಪಾವತಿಸಬೇಕಾಗಿ ಬಂದಿದೆ. ಮಂಜೇಶ್ವರ ಠಾಣ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮರಳು ಸಾಗಾಟ ನಡೆಸುತ್ತಿರುವ ಏಕೈಕ ಕಡವಾಗಿದೆ ಜೋಡು ಕಲ್ಲು ಎಂಬುದಾಗಿ ಪೊಲೀಸ್ ವೃತ್ತಗಳಿಂದ ತಿಳಿದು ಬಂದಿದೆ. ಅಂತೂ ನೂತನ ಎಸ್ಸೈ ಮರಳು ಮಾಫಿಯಾಗಳಿಗೆ ಶಾಪವಾಗಿ ಪರಿಣಮಿಸಿದ್ದಾರೆ.

Related posts

Leave a Reply