Header Ads
Header Ads
Breaking News

ಮರಳು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯ:30 ದಿನದೊಳಗೆ ನ್ಯಾಯ ದೊರೆಯದಿದ್ದರೆ ಬಂದ್‌ಗೆ ಕರೆ

ಕಾರ್ಕಳ: ಲಾರಿ ಚಾಲಕ ಮಾಲಕರ ಸಂಘದಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಕ್ಟೋಬರ್ ೧೮ರಿಂದ ಪ್ರತಿಭಟನೆ ನಡೆಸಲಾಗಿದೆ. ಅ.22ರಂದು ಸಭೆ ನಡೆಸಿ ಜಿಲ್ಲಾಧಿಕಾರಿಯವರಿಗೆ ಬೇಡಿಕೆಗಳನ್ನು ತಿಳಿಸಲಾಗಿದೆ. 30 ದಿನಗಳ ಕಾಲಾವಕಾಶ ನೀಡಿದ್ದಾರೆ. ಮುಂದಿನ 30 ದಿನಗಳಲ್ಲಿ ನಮ್ಮ ಬೇಡಿಕೆ ಈಡೆರಿಸಿ ನ್ಯಾಯ ದೊರೆಯದಿದ್ದರೆ ಜಿಲ್ಲೆಯಾದ್ಯಂತ ಬಂದ್‌ಗೆ ಕರೆ ನೀಡಿ ಪ್ರತಿಭಟನೆ ನಡೆಸಲಾಗುವುದು. ವಿವಿಧ ಸಂಘಟನೆಗಳ ಬೆಂಬಲವಿದೆ ಎಂದು ಮರಳು ಪರವಾನಿಗೆದಾರರ ಹಾಗೂ ಲಾರಿ ಚಾಲಕ, ಮಾಲಕರ ಸಂಘದ ಗೌರವಾಧ್ಯಕ್ಷ ಉದಯ ಕುಮಾರ್ ಹೆಗ್ಡೆಯವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರಿಯಾದ ಪ್ರಮಾಣದಲ್ಲಿ ಮರಳು ದೊರೆಯದೇ ಸಾಕಷ್ಟು ಸಮಸ್ಯೆಗಳನ್ನು ಕಳೆದ ೫ ವರ್ಷಗಳಿಂದ ಎದುರಿಸುತ್ತಿದ್ದೇವೆ. ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಯಾವುದೇ ಅನುಮತಿ ನೀಡಿಲ್ಲ. ಸಮಸ್ಯೆ ಪರಿಹಾರ ಮಾಡಲು ಮುಂದಾಗಲಿಲ್ಲ. ಜತೆಗೆ ನಮ್ಮನ್ನು ಪ್ರತಿಭಟನೆ ನಡೆಸಲು ಬಿಡಲಿಲ್ಲ. ನಮ್ಮ ವಾಹನಗಳು ಉಡುಪಿಗೆ ತೆರಳದಂತೆ ಅಲ್ಲಲ್ಲಿ ತಡೆದಿದ್ದಾರೆ ಎಂದರು. ಜಿಲ್ಲಾಡಳಿತ, ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರತಿಯೊಬ್ಬರೂ ಕಳೆದ ಕೆಲವು ವರ್ಷಗಳಿಂದ ಕೇವಲ ಭರವಸೆ ಮಾತ್ರ ನಿಡಿದ್ದಾರೆ.

ಪ್ರತೀ ವರ್ಷ ನಾವು ಬೇಡಿಕೆ ನೀಡುತ್ತಲೇ ಬಂದಿದ್ದೇವೆ. ಹೋರಾಟಕ್ಕೆ ಸರಿಯಾದ ನ್ಯಾಯ ದೊರಕಿಲ್ಲ. ಬ್ಯಾಂಕ್ ಸಾಲ ಪಡೆದು ವಾಹನ ಖರೀದಿಸಿದವರು ಈಗಾಲೇ ತಮ್ಮ ವಾಹನಗಳನ್ನು ಕಳೆದುಕೊಳ್ಳುವಂತಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಉದಯ ಕುಮಾರ್, ಜಯರಾಮ್ ಕಡಾರಿ, ಅರುಣ್, ರಾಧಾಕೃಷ್ಣ ನಾಯಕ್, ರಾಜೇಶ್ ಉಪಸ್ಥಿತರಿದ್ದರು.

Related posts

Leave a Reply