Header Ads
Header Ads
Header Ads
Breaking News

ಮರಳು ಸಮಸ್ಯೆ ವಿರೋಧಿಸಿ ಸುಳ್ಯದಲ್ಲಿ ಕಾರ್ಮಿಕರ ಪ್ರತಿಭಟನೆ ಸಾಂಕೇತಿಕ ರಸ್ತೆ ತಡೆಗೆ ಪೊಲೀಸರ ತಡೆ ಲಾಠಿ ಪ್ರಹಾರದಿಂದ ಕೆರಳಿದ ಕಾರ್ಮಿಕರು ಪೋಲೀಸರ ನಡುವೆ ವಾಗ್ವಾದ ಮತ್ತು ಘರ್ಷಣೆ

 

ಮರಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮತ್ತು ಅವೈಜ್ಞಾನಿಕ ಹಾಗೂ ಕರಾಳ ಮರಳು ನೀತಿಯ ನಿಷೇಧಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಶನ್ ವತಿಯಿಂದ ಸುಳ್ಯದಲ್ಲಿ ಪ್ರತಿಭಟನೆ ನಡೆಯಿತು.ಈ ವೇಳೆ ಲಾಠಿಪ್ರಹಾರ ನಡೆದು ಕಾರ್ಮಿಕರು ಹಾಗೂ ಪೋಲೀಸರ ನಡುವೆ ವಾಗ್ವಾದ ಮತ್ತು ಘರ್ಷಣೆಗೆ ಕಾರಣವಾದ ಘಟನೆ ಕುಡ ನಡೆಯಿತು.ಇನ್ನು ಮೆರವಣಿಗೆ ವೇಳೆ ಐದು ನಿಮಿಷದ ಸಾಂಕೇತಿಕ ರಸ್ತೆ ತಡೆಯ ಬಳಿಕ ಪ್ರತಿಭಟನಾ ಸಭೆ ಮಾಡುವುದಾಗಿ ಸಂಘದ ಅಧ್ಯಕ್ಷ ಕೆ.ಪಿ. ಜಾನಿಯವರು ಘೋಷಿಸಿದರು.

ಈ ವೇಳೆ ಪ್ರತಿಭಟನಾಕಾರರು ರಸ್ತೆಯ ಮಧ್ಯ ಭಾಗಕ್ಕೆ ಬಂದು ರಸ್ತೆಯಲ್ಲಿ ಕುಳಿತುಕೊಳ್ಳಲು ಮುಂದಾಗಿ, ಆ ದಾರಿಯಾಗಿ ಬಂದ ವಾಹನಗಳನ್ನು ತಡೆದು ಘೋಷಣೆಗಳನ್ನು ಕೂಗಿದರು. ರಸ್ತೆ ತಡೆ ನಡೆಸುವುದಕ್ಕೆ ಪೊಲೀಸರು ಅಸಮ್ಮತಿ ಸೂಚಿಸಿದಾಗ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿ ತೆರಳುವುದಾಗಿ ಜಾನಿಯವರು ಹೇಳಿದರು. ಈ ವೇಳೆ ಮುಖಂಡರು ಮತ್ತು ಪೊಲೀಸರ ನಡುವೆ ವಾಗ್ವಾದ ಕೂಡ ನಡೆಯಿತು. ಮತ್ತೊಂದು ಬದಿಯಲ್ಲಿ ಕಾರ್ಮಿಕರು ರಸ್ತೆಯ ಮಧ್ಯೆ ಬರುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಕೆಲವು ಕಾರ್ಮಿಕರ ಮೇಲೆ ಲಾಠಿ ಪ್ರಹಾರ ನಡೆಸಿದರೆಂದು ಕಾರ್ಮಿಕರು ಕೆರಳಿದರು.. ಸ್ವಲ್ಪ ಹೊತ್ತು ಪೊಲೀಸರು ಮತ್ತು ಕಾರ್ಮಿಕರ ನಡುವೆ ನೂಕಾಟ ತಳ್ಳಾಟ ನಡೆದು ಕೆಲಹೊತ್ತು ಬಿಗು ವಾತವರಣ ನಿರ್ಮಾಣವಾಗಿತ್ತು

Related posts

Leave a Reply