Header Ads
Header Ads
Header Ads
Breaking News

ಮರಳೆತ್ತುವ ವಿಚಾರದಲ್ಲಿ ನಿರಪೇಕ್ಷಣಾ ಪತ್ರ ಸಮಯ ಕಳೆದರೂ ಮರಳೆತ್ತುವ ಕಾರ್ಯ ಸ್ಥಗಿತ ಬಿಜೆಪಿಯಿಂದ ವಿಟ್ಲದಲ್ಲಿ ಬೃಹತ್ ಪ್ರತಿಭಟನೆ

ವಿಟ್ಲ: ಕೇಂದ್ರ ಪರಿಸರ ಇಲಾಖೆಯಿಂದ ನದಿಗಳಿಂದ ಮರಳೆತ್ತುವ ವಿಚಾರದಲ್ಲಿ ನಿರಪೇಕ್ಷಣಾ ಪತ್ರ ನೀಡಿ ಸಮಯ ಕಳೆದರೂ, ಕಳೆದ 6-7 ತಿಂಗಳಿಂದ ಮರಳೆತ್ತುವ ಕಾರ್ಯ ಸ್ಥಗಿತವಾಗಿರುವ ಉದ್ದೇಶವೇನು? ಎಂದು ಜಿಲ್ಲಾ ಬಿಜೆಪಿ ಅಧಕ್ಷ ಸಂಜೀವ ಮಠಂದೂರು ಹೇಳಿದರು.

ಅವರು ಗಾರೆ ಹಾಗೂ ಮೇಸ್ತ್ರಿ ಕೆಲಸವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ನೂರಾರು ಬಡ ಕುಟುಂಬಗಳ ಜೀವನದಲ್ಲಿ ರಾಜಕೀಯದಾಟವಾಡುತ್ತ ಅಕ್ರಮ ಮರಳು ದಾಸ್ತಾನುಮಾಡುತ್ತ ಮರಳು ಸಿಗದೆ ಕೆಲಸವೇ ಇಲ್ಲದೆ ಪರದಾಡುತ್ತಿರುವ ಬಡ ಕಾರ್ಮಿಕರ ಅಸ್ತಿತ್ವಕ್ಕಾಗಿ ವಿಟ್ಲ ಚಂದ್ರನಾಥ ಬಸದಿ ಬಳಿಯಿಂದ ನಾಲ್ಕು ಮಾರ್ಗ ಜಂಕ್ಷನ್ ವರೆಗೆ ಬೃಹತ್ ಮೆರವಣಿಗೆ ನಡೆಸಿ ಪ್ರತಿಭಟನಾಕಾರರನ್ನುದ್ದೇಶಿ ಮಾತನಾಡಿದರು.

ಜಿಲ್ಲಾ ರೈತ ಮೋರ್ಛಾ ಅಧ್ಯಕ್ಷ ರಾಜೀವ ಭಂಡಾರಿ ಮಾತನಾಡಿ 1.20 ಲಕ್ಷದ ಆಶ್ರಯ ಮನೆ ನಿರ್ಮಿಸುವವರ ಪರಿಸ್ಥಿತಿ ಶೋಚನೀಯವಾಗಿದೆ. ಕಾರ್ಮಿಕರು ಮರಳಿಲ್ಲದೆ ಕೆಲಸವಿಲ್ಲದೆ ಆತ್ಮಹತ್ಯೆ ಮಾಡುವ ಸ್ಥಿತಿ ತಲುಪಿದೆ ಎಂದು ಹೇಳಿದರು.

ರೈತ ಮೋರ್ಛಾ ಪ್ರಧಾನಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಮಂಡಲ ಯುವ ಮೋರ್ಛಾ ಅಧ್ಯಕ್ಷ ಸುನಿಲ್ ದಡ್ಡು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜಗನ್ನಾಥ್ ಸಾಲ್ಯಾನ್, ವಿಟ್ಲ ನಗರ ಬಿಜೆಪಿ ಅಧ್ಯಕ್ಷ ಮೋಹನದಾಸ್ ಉಕ್ಕುಡ, ಕಾರ್ಯದರ್ಶಿ ಉದಯಕುಮಾರ್ ಆಲಂಗಾರು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ಮಹಮ್ಮದ್ ಅಲಿ ವಿಟ್ಲ

Related posts

Leave a Reply