Header Ads
Breaking News

ಮರವಂತೆ ಬಳಿ ಕಾರುಗಳ ಮುಖಾಮುಖಿ ಡಿಕ್ಕಿ, ಒಬ್ಬರ ಸಾವು, ಮೂವರಿಗೆ ಗಂಭೀರ ಗಾಯ

ಮರವಂತೆಯ ಅಪೂರ್ವ ಹೊಟೇಲ್ ಬಳಿ ಮಾರುತಿ ಆಲ್ಟೋ ಹಾಗೂ ಸ್ವಿಫ್ಟ್ ಕಾರುಗಳ ನಡುವೆ ಸಂಭವಿಸಿದ ಮುಖಾಮುಖೀ ಢಿಕ್ಕಿಯಲ್ಲಿ ಆಲ್ಟೋ ಕಾರಿನ ಚಾಲಕ ತಮಿಳುನಾಡು ಮೂಲದ ಪ್ರಸ್ತುತ ಬೆಂಗಳೂರಿನ ಎಂ. ಜಿ. ರಸ್ತೆಯ ನಿವಾಸಿ ಧನಪಾಂಡ್ಯನ್ ಮೃತಪಟ್ಟಿದ್ದು, ಓರ್ವ ಬಾಲಕ ಸಹಿತ ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರಿನಿಂದ ಪಣಜಿಗೆ ತೆರಳುತ್ತಿದ್ದ ಕುಟುಂಬವಿದ್ದ ಸ್ವಿಫ್ಟ್ ಕಾರು ಹಾಗೂ ಮುರುಡೇಶರ ಯಾತ್ರೆ ಮುಗಿಸಿ ಧರ್ಮಸ್ಥಳದ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಕುಟುಂಬವಿದ್ದ ಆಲ್ಟೋ ಕಾರು ನಡುವೆ ಢಿಕ್ಕಿ ಸಂಭವಿಸಿತ್ತು. ಢಿಕ್ಕಿಯಾದ ರಭಸಕ್ಕೆ ಆಲ್ಟೋ ಕಾರು ನುಜ್ಜು ಗುಜ್ಜಾಗಿದ್ದು, ಅದೇ ಕಾರಿನಲ್ಲಿದ್ದ ೩೬ರ ಧನಪಾಂಡ್ಯನ್ ಅವರ ಪುತ್ರ ೪ರ ಕಮಲಿ, ೬೫ರ ತಂದೆ ಕಾಮಾಟಿ, ೫೫ರ ತಾಯಿ ಸರೋಜಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪುತ್ರ ೮ರ ನಿದರ್ಶನ ಹಾಗೂ ಪತ್ನಿ ವಾಸುಕಿ ಗಾಯಗೊಂಡು ಮಣಿಪಾಲ ಆಸ್ಪ