Header Ads
Breaking News

ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ : ಮಾರ್ಚ್ 28ರಂದು ನಡೆಯಲಿರುವ ಅಭಾರಿ ಸೇವೆ

ಉಡುಪಿ ಜಿಲ್ಲೆ ಬೈಂದೂರು ತಾಲೂಕು ಮರವಂತೆ, ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ, ಶ್ರೀ ರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿಯ ವತಿಯಿಂದ 28ನೇ ಅಭಾರಿ ಸೇವೆ ನಡೆಯಲಿದ್ದು, ಈ ವಿಶೇಷ ಸೇವೆಯನ್ನು ಅತಿವೃಷ್ಟಿ, ಅನಾವ್ರಷ್ಟಿ ಹಾಗೂ ಮತ್ಸಕ್ಷಾಮ ಮುಂತಾದ ತೊಂದರೆ ನಿವಾರಣೆಗೆ ಊರಿನ ಗ್ರಾಮಸ್ಥರು ಹಾಗೂ ಮಿನೂಗಾರರು ಸಲ್ಲಿಸುವ ವಿಶೇಷ ಸೇವೆಯೇ ಅಭಾರಿ ಸೇವೆಯಾಗಿರುತ್ತದೆ.


ಅಭಾರಿ ಸೇವೆಯು ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಾ.28ರ ಭಾನುವಾರ ಬೆಳಿಗ್ಗೆ 8ಘಂಟೆಗೆ ಶ್ರೀ ವರಾಹ, ವಿಷ್ಣು, ನರಸಿಂಹಾ ಹಾಗೂ ಗಂಗಾಧರೇಶ್ವರ ಸನ್ನಿದಿಯಲ್ಲಿ ಮಹಾ ಗಣಪತಿ ಹವನ, ಚಂಡಿಕಾ ಹವನ, ವಿಷ್ಣು ಸೂಕ್ತಹವನ, ಏಕದಶ ರುದ್ರ ಪುರುಷರ ರುದ್ರಾಹವನ, ಕಲಾಶಾಭಿμÉೀಕ ಹಾಗೂ ಮಹಾಪೂಜೆ ಜರುಗಲಿದ್ದು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಹಾಗೂ ಅದೇ ದಿನ ರಾತ್ರಿ 9ಘಂಟೆಗೆ ಮಹಾರಂಗ ಪೂಜೆ ನಡೆಯಲಿದೆ.

Related posts

Leave a Reply

Your email address will not be published. Required fields are marked *