Header Ads
Header Ads
Breaking News

ಮರವಂತೆ ಹೊರ ಬಂದರು ಕಾಮಗಾರಿ, ಆರಂಭದಲ್ಲೇ ಕಡಲಬ್ಬರಕ್ಕೆ ಬಲಿ

ಮರವಂತೆಯಲ್ಲಿ ನಿರ್ಮಾಣವಾಗುತ್ತಿರುವ ಮೀನುಗಾರಿಕಾ ಹೊರ ಬಂದರು ಪ್ರದೇಶದಲ್ಲಿ ಕಡಲಬ್ಬರ ತೀವ್ರಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಕೆಲವೆಡೆ ಅಲೆಗಳು ತಡೆಗೋಡೆಯನ್ನು ಕೊರೆದು ಮುನ್ನುಗ್ಗುತ್ತಿವೆ. ಮೀನುಗಾರರು ವಿಶ್ರಾಂತಿಗೆಂದು ನಿರ್ಮಿಸಿಕೊಂಡಿರುವ ತಾತ್ಕಾಲಿಕ ಕಟ್ಟಡಗಳು ಕುಸಿದಿವೆ. ಕೆಲವು ತೆಂಗಿನ ಮರಗಳು ಸಮುದ್ರಪಾಲಾಗುವ ಭೀತಿ ಎದುರಾಗಿದೆ.
ಸುಮಾರು ೧೫೦ ಮೀ. ಉದ್ದಕ್ಕೆ ದಡದ ಮೇಲೇರಿ ಬರುತ್ತಿರುವ ಅಲೆಗಳು ಕಾಂಕ್ರೀಟು ರಸ್ತೆಗೆ ಅಪ್ಪಳಿಸುತ್ತಿರುವುದರಿಂದ ಕೆಲವೆಡೆ ಬಿರುಕುಗಳು ಉಂಟಾಗಿ ಸಂಪರ್ಕ ರಸ್ತೆ ಕಡಿದುಹೋಗುವ ಭೀತಿ ಎದುರಾಗಿದೆ. ಇಲ್ಲಿ ರಸ್ತೆ ಸಂಪರ್ಕ ಕಡಿದಲ್ಲಿ ಅದರ ಅಂಚಿನಲ್ಲಿ ರಸ್ತೆಗಿಂತ ಕೆಳಮಟ್ಟದಲ್ಲಿರುವ ಮೀನುಗಾರರ ಮನೆಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ.

Related posts

Leave a Reply