Breaking News

ಮರವೂರು ಬಳಿ ಕೊಳಕಾದ ಫಲ್ಗುಣಿ ನೀರು, ಸಂಸದ ನಳಿನ್‌ಕುಮಾರ್ ಕಟೀಲ್ ಭೇಟಿ

ಮರವೂರು ಫಲ್ಗುಣಿ ನದಿಗೆ ಕಂಪನಿಗಳು ಹೊರಸೂಸುವ ರಾಸಾಯನಿಕ ಮಿಶ್ರಣಗೊಂಡು ನೀರು ಕಲುಷಿತಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಂಜೆ ವೀಕ್ಷಿಸಿದರು.
ಕಲುಷಿತ ಸೂಸುವ ಕಾರ್ಖಾನೆಗಳ ವಿರುದ್ಧ ಕಿಡಿಕಾರಿದ ನಳಿನ್ ಅವುಗಳ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜನರಿಗೆ ಕುಡಿಯುವ ನೀರಿನ ಉದ್ದೇಶದಿಂದ ನದಿಗೆ ವೆಂಟೆಡ್ ಡ್ಯಾಂ ನಿರ್ಮಿಸಲಾಗಿದ್ದು, ಕಾರ್ಖಾನೆಗಳ ರಾಸಾಯನಿಕದಿಂದ ಈ ಸ್ಥಿತಿ ಬಂದೊದಗಿದೆ. ಜಲಚರಗಳು ಸಾಯುವಂತಾಗಿದ್ದು, ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಬಳಿಕ ಪೊರ್ಕೋಡಿಯಲ್ಲಿ ಕಲುಷಿತ ನೀರು ಸೇವಿಸಿ ಜಾನುವಾರುಗಳು ಮೃತಪಟ್ಟ ಪ್ರದೇಶಕ್ಕೆ ಭೇಟಿ ನೀಡಿ ಮನೆಯವರ ಜೊತೆ ಮಾತುಕತೆ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಕಾರ್ಖಾನೆಗಳ ವಿರುದ್ಧ ಹೋರಾಟ ನಡೆಸುವ ಬಗ್ಗೆ ಮಾಹಿತಿ ನೀಡಿದ್ದಾರೆ.

Related posts

Leave a Reply