
ಉಡುಪಿಯ ಕರಾವಳಿ ಭಾಗದಲ್ಲಿ ಗುಳಿದ ದೈವದ ಆರಾಧನೆಗೆ ವಿಶೇಷ ಆಕರ್ಷಣೆ ಇದೆ. ಗುಳಿಗ ದೈವದ ರೋಷಾವೇಷ ನೋಡೋದೇ ಒಂದು ರೋಮಾಂಛಕ ಅನುಭವ. ರೋಷದಿಂದ ನುಗ್ಗುವ ದೈವವನ್ನು ಹಿಡಿಯಲೆಂದೇ ಸಾವಿರಾರು ಭಕ್ತರು ದೈವಾರಾಧನೆಯ ವೇಳೆ ಸೇರ್ತಾರೆ. ಉಡುಪಿ ಜಿಲ್ಲೆ ಶಂಕರಪುರದ ಶಿವಾನಂದ ನಗರದಲ್ಲಿರುವ ಬಬ್ಬುಸ್ವಾಮಿ ದೇವಸ್ಥಾನ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಗುಳಿಗಾರಾಧನೆ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಕಾರಣ ಏನು ಗೊತ್ತಾ? ಇಲ್ಲಿ ಗುಳಿಗ ದೈವದ ಅಬ್ಬರ ಅದು ಹೇಗಿತ್ತೆಂದರೆ, ಅಲ್ಲಿ ಸೇರಿದ ಜನರಿಗೆ ದೈವವನ್ನು ಹಿಡಿಯಲು, ತಡೆಯಲು ಸಾಧ್ಯವೇ ಆಗಿಲ್ಲ. ಜನರಿಂದ ತಪ್ಪಿಸಿಕೊಂಡ ದೈವ ಅಲ್ಲೇ ಪಕ್ಕದಲ್ಲಿದ್ದ ಬೃಹದಾಕಾರದ ಮರ ಏರಿಯೇ ಬಿಟ್ಟಿತ್ತು. ಭಕ್ತರು ಎಷ್ಟೇ ನಿವೇಧಿಸಿದರೂ ಕೆಳಗಿಳಿಯಲೇ ಇಲ್ಲ. ಕೆಲ ಕಾಲ ಮರದಲ್ಲೇ ನರ್ತನ, ದರ್ಶನ ಪೂರೈಸಿ ಕೆಳಗಿಳಿಸಬೇಕಾದರೆ ಭಕ್ತರು ಸುಸ್ತಾಗಿ ಹೋದರು. ಗುಳಿಗ ದೈವವು ನರ್ತನದ ವೇಳೆ, ಗುಂಪಿನಿಂದ ಹಾರಿ ಹೊರ ಹೋಗೋದು, ಮತ್ತು ಹೊರಹೋಗಂತೆ ಭಕ್ತರು ತಡೆಯೋದನ್ನು ನೋಡೋದೇ ಒಂದು ರೋಮಾಂಛಕ ಅನುಭವ. ಗುಳಿಗ ದೈವದ ಆರಾಧನೆಗೆ ಈ ಕಾರಣದಿಂದಲೇ ವಿಶೇಷ ಮಹತ್ವ.