Breaking News

ಮರ ಕಡಿಯುತ್ತಿದ್ದ ವ್ಯಕ್ತಿಯ ಮೇಲೆ ಗುಂಡೇಟು, ಕಾರ್ಕಳದ ಕಡ್ತಲ ಮೀಸಲು ಅರಣ್ಯದಲ್ಲಿ ಘಟನೆ


ಶಿಕಾರಿಗೆ ತೆರಳಿದ ವೇಳೆ ಪ್ರಾಣಿ ಎಂದು ತಿಳಿದು ಮರ ಕಡಿಯುತ್ತಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ಪರಿಣಾಮ ಹಾರಿಸಿದ ಗುಂಡು ಮರ ಕಡಿಯುತ್ತಿದ್ದ ವ್ಯಕ್ತಿಗೆ ತಗುಲಿ ಸಾವನ್ನಪ್ಪಿದ ಘಟನೆ ತಡರಾತ್ರಿ ಕಾರ್ಕಳ ತಾಲೂಕಿನ ಕಡ್ತಲ ಮೀಸಲು ಅರಣ್ಯದಲ್ಲಿ ನಡೆಸಿದೆ.
ನಿನ್ನೆ ತಡರಾತ್ರಿ ಐದು ಜನರನ್ನೊಳಗೊಂಡ ತಂಡವೊಂದು ಕಡ್ತಲ ಮೀಸಲು ಅರಣ್ಯದಲ್ಲಿ ಶಿಕಾರಿಗೆ ತೆರಳಿದ್ದರು. ಇದೇ ವೇಳೆ ರವಿ ಎಂಬಾತ ಮರಕಳ್ಳತನ ನಡೆಸಲು ಬಂದಿದ್ದ ಎನ್ನಲಾಗಿದೆ. ರವಿ ಮರ ಕಡಿಯುತ್ತಿದ್ದು ಶಿಕಾರಿಗೆ ಬಂದ ತಂಡವನ್ನು ದೂರದಿಂದ ಗಮನಿಸಿ ಅತ ಅರಣ್ಯಧಿಕಾರಿಯೆಂದು ತಿಳಿದು ಓಡಿದಾಗ ಶಿಕಾರಿಗೆ ಬಂದ ತಂಡ ಪ್ರಾಣಿ ಎಂದು ಗುಂಡು ಹಾರಿಸಿದ್ದಾರೆ.
ಈ ಗುಂಡು ರವಿಗೆ ತಗುಲಿದ ಪರಿಣಾಮ ಅತ ಸಾವನ್ನಪ್ಪಿದ್ದು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲಕ್ಕೆ ಶವವನ್ನು ರವಾನಿಸಲಾಗಿದೆ. ಶಿಕಾರಿ ನಡೆಸಿದ ಸುಂದರ್ ನಾಯ್ಕ್ ಹಾಗೂ ಜೀತು ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ. ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಉಳಿದ ಅರೋಪಿಗಳ ಪತ್ತೆ ಕಾರ್ಯ ಮುಂದುವರೆಸಿದ್ದಾರೆ. ಮರ ಕಡಿದ ಜಾಗದಲ್ಲಿ ಗರಗಸ ಹಾಗೂ ಮರ ಕಡಿಯುವ ಅಯುದಗಳನ್ನು ಅರಣ್ಯಧಿಕಾರಿ ವಶಪಡಿಸಿಕೊಂಡಿದ್ದಾರೆ.

Related posts

Leave a Reply