Header Ads
Header Ads
Breaking News

ಮಲಬಾರ್ ಗೋಲ್ಡ್ ಹಾಗೂ ಡೈಮಂಡ್ಸ್‌ನಿಂದ ವಿಶ್ವ ಪರಿಸರ ದಿನಾಚರಣೆ

ಮಂಗಳೂರಿನ ಮಲಬಾರ್ ಗೋಲ್ಡ್ ಹಾಗೂ ಡೈಮಂಡ್ಸ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ನಗರದ ಕೊಟ್ಟಾರ ಪೊದಾರ್ ಇಂಟರ್ ನ್ಯಾಶನಲ್ ಸೂಲ್ಕ್‌ನಲ್ಲಿ ಆಚರಿಸಲಾಯ್ತು.
 ಮಂಗಳೂರಿನ ಹೆಸರಾಂತ ಮಳಿಗೆಯಾದ ಮಲಬಾರ್ ಗೋಲ್ಡ್ ಹಾಗೂ ಡೈಮಂಡ್ಸ್ ವತಿಯಿಂದ ಸೇವ್ ದಿ ಅರ್ಥ್ ಪ್ಲಾನೆಟ್ ಎ ಟ್ರೀ ಎಂಬ ಘೋಷ ವ್ಯಾಕದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ನಗರದ ಕೊಟ್ಟಾರ ಪೊದಾರ್ ಇಂಟರ್ ನ್ಯಾಶನಲ್ ಸೂಲ್ಕ್‌ನಲ್ಲಿ ಆಚರಿಸಲಾಯಿತು.

 

ಇನ್ನು ಪರಿಸರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗಿಡವನ್ನು ವಿದ್ಯಾರ್ಥಿಗಳ ಹೆತ್ತವರಿಗೆ ಗಿಡ ಹಸ್ತಾಂತರವನ್ನು ಮಳಿಗೆಯ ಸ್ಟೋರ್ ಹೆಡ್ ಶರತ್ ಚಂದ್ರನ್ ನೆರೆವೇರಿಸಿದ್ರು. ಇದೇ ವೇಳೆ ಮಳಿಗೆಯ ಮಾರ್ಕೇಟ್ ಮ್ಯಾನೇಜರ್ ಕಾರ್ತೀಕ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರತಿ ವರುಷ ಕೂಡ ಮಲಬಾರ್ ಗೋಲ್ಡ್ ಹಾಗೂ ಡೈಮಂಡ್ಸ್ ವತಿಯಿಂದ ಪರಿಸರದ ಬಗ್ಗೆ ವಿನೂತನ ಕಾರ್ಯಕ್ರಮ ನಡೆಸಲಾಗುತ್ತಿದೆ.

ಇನ್ನು ಮಳಿಗೆಯಲ್ಲೂ ಪರಿಸರ ಜಾಗೃತಿ ಮೂಡಿಸಲು ಗ್ರಾಹಕರಿಗೆ ಗಿಡವನ್ನು ಉಚಿತ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ರು. ಪೊದಾರ್ ಇಂಟರ್ ನ್ಯಾಶನಲ್ ಸೂಲ್ಕ್ ಪ್ರಾಂಶುಪಾಲರಾದ ಟಿ.ಶ್ರೀನಿವಾಸ್ ರಾವ್ ಮಾತನಾಡಿ, ಮಕ್ಕಳು ಪರಿಸರ ದಿನದಂದು ನೀರು ಉಳಿಸುವ, ಸಸಿ ನೆಟ್ಟು ಪೋಷಿಸುವ ಸಂಕಲ್ಪ ತೊಡಗಿಸಿಬೇಕೆಂದು ಹೇಳಿದರು.ಈ ವೇಳೆ ಮಲಬಾರ್ ಗೋಲ್ಡ್ ಹಾಗೂ ಡೈಮಂಡ್ಸ್ ಸಿಬ್ಬಂದಿಗಳು ಹಾಗೂ ಸೇರಿದಂತೆ ಶಿಕ್ಷಕರು ಉಪಸ್ಥಿತಿರಿದ್ರು. ಸುಮಾರು50ಕ್ಕೂ ಅಧಿಕ ಮಂದಿಗೆ ಗಿಡವನ್ನು ಹಸ್ತಾಂತರಿಸಲಾಯ್ತು.

Related posts

Leave a Reply