Header Ads
Breaking News

ಮಲೆಕುಡಿಯರ ಕೈಚಳಕದಲ್ಲಿ ಅರಳುವ ಕುಕ್ಕೇ ಪಂಚರಥಗಳು

ಸುಬ್ರಹ್ಮಣ್ಯ : ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಢಿ ಮಹೋತ್ಸವ ಆರಂಭಗೊಂಡಿದೆ. ಹದಿನೈದು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ಕ್ಷೇತ್ರದ ಅಧಿಪತಿಯಾದ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ರೀತಿಯ ಸೇವೆಗಳೂ ನಡೆಯುತ್ತದೆ. ಷಷ್ಠಿಯ ದಿನ ದೇವರ ಬ್ರಹ್ಮರಥ ನೆರವೇರುತ್ತಿದ್ದು, ಈ ಬ್ರಹ್ಮರಥ ಕಟ್ಟುವುದರಲ್ಲೂ ಕೊಂಚ ವಿಶೇಷತೆಯಿದೆ. ಸಾಮಾನ್ಯವಾಗಿ ರಥವನ್ನು ನೈಲಾನ್ ಹಗ್ಗವೋ ಅಥವಾ ಇತರ ಹಗ್ಗವನ್ನು ಬಳಸಿಕೊಂಡು ಕಟ್ಟಲಾತ್ತದೆ. ಆದರೆ ಸುಬ್ರಹ್ಮಣ್ಯದ ಬ್ರಹ್ಮರಥಕ್ಕೆ ಈ ರೀತಿಯ ಹಗ್ಗವನ್ನು ಬಳಸುವಂತಿಲ್ಲ. ಇದಕ್ಕೆ ದಟ್ಟ ಕಾಡಿನಿಂದ ಆರಿಸಿ ತರುವ ಬಿದಿರು ಹಾಗೂ ನಾಗರ ಬೆತ್ತವನ್ನೇ ಹಗ್ಗವನ್ನೇ ಬಳಸಲಾಗುತ್ತದೆ.

ಸಹಸ್ರಾರು ವರ್ಷಗಳ ಹಿಂದಿನಿಂದಲೇ ಈ ರಥವನ್ನು ಇಲ್ಲಿನ ಮೂಲ ನಿವಾಸಿಗಳಾದ ಮಲೆಕುಡಿಯರೇ ಸಿದ್ದಪಡಿಸುತ್ತಾ ಬರುತ್ತಿದ್ದಾರೆ. ಹುಣ್ಣಿಮೆಯ ದಿನ ರಥ ಕಟ್ಟಲು ಮೂಹೂರ್ತ ಇಡಲಾಗುತ್ತದೆ. ಈ ನಡುವೆ ದೇವರ ಪ್ರಸಾದ, ಅಕ್ಕಿ ಸಾಮಾಗ್ರಿಗಳೊಂದಿಗೆ ಬಿದಿರನ್ನು ತರಲು ಈ ಜನಾಂಗ ಕಾಡಿಗೆ ತೆರಳಿ ನಾಲ್ಕೈದು ದಿನಗಳನ್ನು ಅಲ್ಲಿಯೇ ಕಳೆದು ಬಿದಿರನ್ನು ಆರಿಸಿ ತರುತ್ತಾರೆ.ತಂದ ಬಿದಿರನ್ನು ಹಗ್ಗದ ರೂಪದಲ್ಲಿ ಬಳಸಿ ಹಿರಿಯರ ಮಾರ್ಗದರ್ಶನದಂತೆ ರಥ ಕಟ್ಟುವ ಕೆಲಸದಲ್ಲಿ ತೊಡಗುತ್ತಾರೆ. ಅನಾದಿಕಾಲದಿಂದಲೂ ಹಿರಿಯರ ಪಾಲಿಸಿಕೊಂಡು ಬಂದ ಸಂಪ್ರದಾಯವನ್ನು ಮೂಲ ನಿವಾಸಿಗಳು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಬಿದಿರಿನಿಂದ ತಯಾರಿಸಲು ಸ್ಪಷ್ಠ ಕಾರಣವೇನೆಂದು ತಿಳಿಯದಿದ್ದರೂ ಕ್ಷೇತ್ರದ ಆರಾಧ್ಯ ದೈವ ನಾಗರಾಜನಿಗೂ, ಬಿದಿರಿಗೂ ಅವಿನಾಭಾವ ಸಂಭಂಧವಿದೆ. ಈ ಕಾರಣದಿಂದಲೇ ಬಿದಿರಿನಿಂದಲೇ ರಥವನ್ನು ಕಟ್ಟಲಾಗುತ್ತಿದೆ. ರಥವನ್ನು ಎಳೆಯಲೂ ಬಿದಿರಿನ ಬೆತ್ತವನ್ನೇ ಬಳಸುತ್ತಾರೆ. ರಥೋತ್ಸವ ಬಳಿಕ ಇದೇ ರಥದಲ್ಲಿ ಉಪಯೋಗಿಸುವ ಬಿದಿರಿನ ತುಂಡುಗಳನ್ನು ಭಕ್ತರು ಮನೆಗೆ ಪ್ರಸಾದದಂತೆ ಒಯ್ಯುತ್ತಾರೆ. ಈ ತುಂಡನ್ನು ಮನೆಯಲ್ಲಿಡುವುದರಿಂದ ನಾಗಭಾದೆ ಕಾಡುವುದಿಲ್ಲ ಎಂಬ ನಂಬಿಕೆ ಭಕ್ತರದ್ದಾಗಿದೆ.ಹಲವು ಆಧುನಿಕ ದಾರಗಳು ಇಂದು ಮಾರುಕಟ್ಟೆಯಲ್ಲಿದ್ದರೂ ಸುಬ್ರಹ್ಮಣ್ಯದ ರಥ ಮಾತ್ರ ಇಂದಿಗೂ ಬಿದಿರಿನಿಂದಲೇ ಕಟ್ಟಲ್ಪಡುತ್ತಿದೆ. ಆ ಮೂಲಕ ಹಿಂದಿನ ಸಂಪ್ರದಾಯವನ್ನು ಇಂದಿಗೂ ಉಳಿಸುವಂತೆ ಪ್ರಯತ್ನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದೆ.

ವರದಿ : ರವೀಶ್ ವಿ4 ನ್ಯೂಸ್  ಸುಬ್ರಹಣ್ಯ

Related posts

Leave a Reply

Your email address will not be published. Required fields are marked *