Header Ads
Breaking News

ಕಾಲಬುಡದಲ್ಲೇ ಸಮುದ್ರ ಇದ್ರೂ ಕರ್ನಾಟಕ ಕರಾವಳಿಯ ಜನರಿಗೆ ಅನ್ಯರಾಜ್ಯದ ಮೀನು ತಿನ್ನುವ ದೌರ್ಭಾಗ್ಯ

ಕಾಲಬುಡದಲ್ಲೇ ಸಮುದ್ರ ಇದ್ರೂ ಕರ್ನಾಟಕ ಕರಾವಳಿಯ ಜನರಿಗೆ ಅನ್ಯರಾಜ್ಯದ ಮೀನು ತಿನ್ನುವ ದೌರ್ಭಾಗ್ಯ ಎದುರಾಗಿದೆ. ಏಷ್ಯಾದ ಅತೀದೊಡ್ಡ ಸರ್ವ ಋತು ಮೀನುಗಾರಿಕಾ ಬಂದರಿನಲ್ಲೇ ಮೀನಿಗೆ ಬರಬಂದಿದೆ.ಮಲ್ಪೆ ಬಂದರಿನೊಳಗೆ ತಮಿಳ್ನಾಡು, ಕೇರಳ ರಾಜ್ಯದ ಮೀನುಗಳು ಲಗ್ಗೆ ಇಟ್ಟಿದೆ. ತಾಜಾ-ತಾಜಾ ಮೀನು ಸವಿಯುತ್ತಿದ್ದವರು ಸದ್ಯ ಆಮದಾದ ಬಾಕ್ಸ್ ಮೀನುಗಳನ್ನು ತಿನ್ನುವ ಸಂಕಟ   ಉಂಟಾಗಿದೆ. ಮಲ್ಪೆ ಬಂದರಿಗೆ ಏಷ್ಯಾದ ಸರ್ವಋತು ಮೀನುಗಾರಿಕಾ ಬಂದರು ಎಂಬ ಹೆಗ್ಗಳಿಗೆ ಇದೆ. ಮಳೆಗಾಲವಿರಲಿ, ಸೆಖೆಗಾಲವಿರಲಿ ಎಲ್ಲಾ ಋತುಗಳಲ್ಲೂ ಈ ಬಂದರಿನಲ್ಲಿ ಮೀನುಗಾರಿಕೆ ನಡೆಸಲಾಗುತ್ತೆ. ಈ ಹೆಗ್ಗಳಿಕೆಗೆ ಅಪವಾದವೋ ಎಂಬಂತೆ ಸದ್ಯ ಮಲ್ಪೆಯಲ್ಲಿ ಮೀನುಗಾರಿಕೆಯೇ ಸ್ಥಗಿತ ಗೊಂಡಿದೆ. ಸದ್ಯ ಮಲ್ಪೆ ಬಂದರಿಗೆ ಹೊರರಾಜ್ಯದಿಂದ ಬಗೆಬಗೆಯ ಮೀನು ಲಗ್ಗೆ ಇಟ್ಟಿದೆ. ಪ್ರತಿದಿನ 20 ರಿಂದ 35 ಕಂಟೈನರ್ ಗಳಲ್ಲಿ ಮೀನುಗಳನ್ನು ತುಂಬಿ ಬರುತ್ತವೆ. ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆಗೆ ಯೋಗ್ಯವಾದ ಅಗಾಧ ಕಡಲಿದ್ದರೂ ಕೇರಳ ಮತ್ತು ಮದ್ರಾಸಿನಿಂದ ಮೀನು ಆಮದಾಗುತ್ತಿದೆ.ಆಮದುಗೊಂಡ ಮೀನಿನ ಬಾಕ್ಸ್ ಒಂದಕ್ಕೆ ಐದು ಸಾವಿರದಿಂದ ಆರು ಸಾವಿರವರೆಗೂ ನೀಡಬೇಕಾಗುತ್ತೆ. ಈ ಭಾಗದಲ್ಲಿ ಅತೀಹೆಚ್ಚು ಬೇಡಿಕೆ ಇರುವ ಭೂತಾಯಿ,ರಬಾಯಿ ಮೀನುಗಳು ಬೇಕಾಬಿಟ್ಟಿ ಮೌಲ್ಯಕ್ಕೆ ಹರಾಜು ಗೊಳ್ಳುತ್ತಿದೆ. ಗೊಳಾಯಿ, ನಂಗ್ ಮೀನುಗಳ ಬೆಲೆಯಂತೂ ಗಗನಕ್ಕೇರಿದೆ.

ಮಳೆಗಾಲದ ಹಿನ್ನೆಲೆಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ಈಗ ಎರಡು ತಿಂಗಳಕಾಲ ರಜೆ.ಯಾಂತ್ರಿಕೃತ ಬೋಟುಗಳು ಮೀನುಗಾರಿಕೆಗೆ ಕಡಲಿಗೆ ಇಳಿಯುವಂತಿಲ್ಲ. ನಾಡದೋಣಿ ಮೀನುಗಾರಿಕೆ ಆರಂಭಗೊಳ್ಳಬೇಕಿತ್ತು ಅದ್ರೂ ಸರಿಯಾದ ಮಳೆ ಅಥವಾ ತೂಫನ್ ಅಗದೆ ನಾಡದೋಣಿ ಮೀನುಗಾರರು ಕೂಡಾ ಮೀನು ಹಿಡಿಯಲು ಆರಂಭಿಸಿಲ್ಲ. ಹಾಗಾಗಿ ಮಲ್ಪೆ ಬಂದರಿನಲ್ಲಿ ವ್ಯಾಪಾರ ವಹಿವಾಟು ಸ್ಥಗಿತ ಗೊಂಡಿದೆ.ಮೀನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುವ ಮಂದಿ ಕೂಡ ಸಂಕಷ್ಟ ಎದುರಿಸುತ್ತಿದ್ದಾರೆ. ನಾಡ ದೋಣಿ ಮೀನುಗಾರಿಕೆಯೂ ಇಲ್ಲದೆ ಖಾಲಿ ಕೈಯಲ್ಲಿ ಕುಳಿತುವರು ಮಹಿಳೆಯರು ಹೆಚ್ಚು ಬೆಲೆ ತೆತ್ತು ಮದ್ರಾಸ್ ಮೀನುಗಳನ್ನು ಖರೀದಿಸಿ ಮಾರಾಟ ಮಾಡುವ ಪರಿಸ್ಥಿತಿ ಇದೆ. ಬೇಡಿಕೆ ಇದೆ ಅನ್ನೊ ಕಾರಣ ಪೈಪೋಟಿ ಬೆಲೆಯಲ್ಲಿ ಖರೀಧಿಸಲಾಗುತ್ತಿದೆ. ಆದರೆ ತಾಜಾ ಮೀನು ತಿನ್ನುವ ಭಾಗ್ಯ ಮಾತ್ರ ಕರಾವಳಿಗಳಿಗರಿಗೆ ಸದ್ಯಕ್ಕೆ ಇದ್ದಂತಿಲ್ಲ.

ಐಸ್ ಬಾಕ್ಸ್ ಗಳಲ್ಲಿ ಬರುವ ಮೀನುಗಳು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ನಾಡದೋಣಿ ಮೀನುಗಾರಿಕೆ ಚುರುಕು ಗೊಂಡ್ರೆ ಮಾತ್ರ ಅಮದು ಮೀನಿನ ದರಕ್ಕೆ ಕಡಿವಾಣ ಬಿಳಬಹುದು. ಅಲ್ಲಿಯವರೆಗೆ ಮೀನಿಗೆ ಬರ ತ್ಪಪಿದ್ದಲ್ಲ.

Related posts

Leave a Reply

Your email address will not be published. Required fields are marked *